ಚಳಿಗಾಲದಲ್ಲಿ ಕಾರ್ ಕೇರ್‌ಗಾಗಿ 6 ಟಿಪ್ಸ್
ಈಗಾಗಲೇ ಚಳಿಗಾಲ ಆರಂಭವಾಗಿರುವಂತೆಯೇ ದೇಶದೆಲ್ಲೆಡೆ ತಾಪಮಾನದಲ್ಲಿ ಭಾರಿ ಕುಸಿತ ಕಂಡಿದೆ. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಶೈತ್ಯ ಹವೆ ವಿಪರೀತವಾಗಿದೆ. ರಾಜಧಾನಿ ದೆಹಲಿ ಸೇರಿದಂತೆ ಹಲವೆಡೆ ಸಿಂಗಲ್ ಡಿಜಿಟ್ ತಾಪಮಾನ ತಲುಪಿರುವುದು ಈಗಾಗಲೇ ಹಲವರು ಮಂದಿ ಜೀವ ಕಳೆದುಕೊಳ್ಳುವಂತಾಗಿದೆ.
ಅಂದ ಹಾಗೆ ಚಳಿಗಾಲದಲ್ಲಿ ನಿಮ್ಮ ಕಾರುಗಳ ಉತ್ತಮ ನಿರ್ವಹಣೆ ಕಾಪಾಡಲು ಕೆಲವೊಂದು ವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಈ ಬಗ್ಗೆ ನೀವು ಬಲ್ಲಿರಾ? ಹಾಗಿದ್ದರೆ ಡ್ರೈವ್ ಸ್ಪಾರ್ಕ್ ಇಂದಿನ ಲೇಖನದಲ್ಲಿ ಚಳಿಗಾಲದಲ್ಲಿ ಕಾರ್ ಕೇರ್ ಟಿಪ್ಸ್ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಬ್ಯಾಟರಿ
ಚಳಿಗಾಲದಲ್ಲಿ ಕಾರಿನ ಬ್ಯಾಟರಿ ನಿರ್ವಹಣೆ ಖಾತ್ರಿಪಡಿಸುವುದು ಅತಿ ಮುಖ್ಯವಾಗಿದೆ. ಮುಂಜಾನೆಯ ಶೈತ್ಯ ಹವಾಮಾನದಲ್ಲಿ ಕಾರು ಸ್ಟಾರ್ಟ್ ಮಾಡುವುದರಲ್ಲಿ ಬ್ಯಾಟರಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಹೆಚ್ಚಿನ ವಿದ್ಯುತ್ ಅಗತ್ಯವಿರುತ್ತದೆ. ಒಂದು ವೇಳೆ ಬ್ಯಾಟರಿ ಬದಲಾಯಿಸುವ ಅಗತ್ಯ ಕಂಡುಬಂದ್ದಲ್ಲಿ ಹಿಂದು ಮುಂದು ನೋಡದೆ ಆದಷ್ಟು ಬೇಗನೇ ಬ್ಯಾಟರಿ ಬದಲಾಯಿಸಿರಿ.

ಎಂಜಿನ್ ಓಯಿಲ್ ಪರಿಶೀಲಿಸಿ
ಚಳಿಗಾಲ ಎದುರಿಸುವ ಮುನ್ನ ನಿಮ್ಮ ಕಾರಿನ ಎಂಜಿನ್ ಓಯಿಲ್ ಮಟ್ಟವನ್ನು ಪರಿಶೀಲಿಸುತ್ತಿರಿ. ಹಾಗೊಂದು ವೇಳೆ ಎಂಜಿನ್ ಒಯಿಲ್ ಬದಲಾಯಿಸಬೇಕಾದರೆ ತಕ್ಷಣ ಬದಲಾಯಿಸಿರಿ. ಹೆಚ್ಚು ಜಿಗುಟಾದ ಓಯಿಲ್ ಬಳಸಿದರೆ ಶೂನ್ಯ ತಾಪಮಾನದಲ್ಲೂ ಎಂಜಿನ್ ನಯಗೊಳಿಸಲು ನೆರವಾಗಲಿದೆ. ಇದಕ್ಕಾಗಿ ಅಧಿಕೃತ ಸರ್ವಿಸ್ ಸೆಂಟರ್‌ಗೆ ತೆರಳಿ ಮಾಹಿತಿ ಪಡೆದರೆ ಉತ್ತಮ. ರೆಡಿಯೇಟರ್‌ಗಳಲ್ಲಿ ಬಳಸುವ ಕೂಲಂಟ್ ಕೂಡಾ ಪುನಭರ್ತಿ ಮಾಡುವ ಅಗತ್ಯವಿರುತ್ತದೆ.

ವಿಂಡ್ ಶೀಲ್ಡ್ ವೈಪರ್ ಹಾಗೂ ವಾಶರ್ ಫ್ಯೂಯಡ್
ಬೆಳಗ್ಗೆಯ ಮಂಜು ವಾತಾವಾರಣದಲ್ಲಿ ವಿಂಡ್ ಶೀಲ್ಡ್ ವೈಪರ್ ಹಾಗೂ ವಾಶರ್ ಫ್ಯೂಯಡ್ ನಿರ್ವಹಣೆ ಪ್ರಮುಖವಾಗಿರುತ್ತದೆ.

ಏರ್ ಕಂಡೀಷನಿಂಗ್
ಚಳಿಗಾಲದಲ್ಲಿ ಕಾರಿಗೆ ಏರ್ ಕಂಡೀಷನಿಂಗ್ ಅಗತ್ಯವಾದರೂ ಏನು ಎಂಬ ಗೊಂದಲ ನಿಮ್ಮಲ್ಲಿ ಮೂಡಬಹುದು. ಆದರೆ ಚಳಿಗಾಲದಲ್ಲಿ ಸಮರ್ಪಕವಾಗಿ ಕೆಲಸ ಮಾಡುವ ಎಸಿ ಅಗತ್ಯವಿರುತ್ತದೆ. ಇದರಿಂದ ವಿಂಡ್ ಸರ್ಕ್ಯೂಲೆಷನ್‌ಗೆ ನೆರವಾಗುತ್ತದೆ. ಹಾಗೆಯೇ ಗಾಜಿಗೆ ಆವರಿಸುವ ಮಂಜಿನ ಹನಿಯನ್ನು ಎಸಿ ನಿವಾರಿಸಲಿದೆ.

ಫಾಗ್ ಲ್ಯಾಂಪ್
ಚಳಿಗಾಲದಲ್ಲಿ ಕಾರು ಚಾಲನೆಯಲ್ಲಿ ಫಾಗ್ ಲ್ಯಾಂಪ್ ಮತ್ತೊಂದು ಪ್ರಮುಖ ಘಟಕವಾಗಿದೆ. ಒಂದು ವೇಳೆ ಬೆಳಗ್ಗಿನ ಜಾವದಲ್ಲಿ ವಾತಾವರಣವನ್ನು ಮಂಜು ಆವರಿಸಿದ್ದರೆ ಫಾಗ್ ಲ್ಯಾಂಪ್‌ಗಳು ಕಾರಿನ ಸೇಫ್ ಡ್ರೈವಿಂಗ್‌ಗಾಗಿ ನೆರವು ಮಾಡಲಿದೆ. ಹಾಗೆಯೇ ಕಾರಿನ ಬಲ್ಬ್ ಕೂಡಾ ಸರಿಯಾಗಿ ಕೆಲಸ ಮಾಡುವುದನ್ನು ಖಾತ್ರಿಪಡಿಸಬೇಕಾಗುತ್ತದೆ.

ಟಯರ್
ಚಳಿಗಾಲದಲ್ಲಿ ಟಯರ್ ಸಮರ್ಪಕವಾಗಿ ನಿರ್ವಹಿಸುವುದನ್ನು ಖಾತ್ರಿ ಪಡಿಸುವುದು ಅತಿ ಅಗತ್ಯ. ಇದರಿಂದ ಹೆಚ್ಚಿನ ತೊಂದರೆಗಳನ್ನು ತಪ್ಪಿಸಬಹುದು. ಚಳಿಗಾಲದಲ್ಲಿ ಮೇಲಿನ ಎಲ್ಲ ವಿಚಾರಗಳನ್ನು ಪಾಲಿಸುವುದು ಅತಿ ಅಗತ್ಯ.
ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿರಿ.


Click it and Unblock the Notifications








