ಮೇ ತಿಂಗಳಲ್ಲಿ 6,036 ಯುನಿಟ್ ಹೋಂಡಾ ಅಮೇಜ್ ಮಾರಾಟ
ಒಟ್ಟಾರೆಯಾಗಿ ಹೋಂಡಾ ಮಾರಾಟದ ಒಟ್ಟು 11,342 ಯುನಿಟ್‌ಗಳ ಪೈಕಿ ಶೇಕಡಾ 53ರಷ್ಟು ಅಂದರೆ 6036 ಯುನಿಟ್ ಮಾರಾಟ ಸಾಧಿಸುವಲ್ಲಿ ಅಮೇಜ್ ಯಶಸ್ವಿಯಾಗಿದೆ. ಇದಕ್ಕೆ 738 ರಫ್ತು ಯುನಿಟ್ ಸೇರ್ಪಡೆಯಾದಾಗ ಹೋಂಡಾವು ಮೇ ತಿಂಗಳಲ್ಲಿ ಒಟ್ಟು 12,080 ಯುನಿಟ್ ಮಾರಾಟ ದಾಖಲಿಸಿದೆ.
ಈ ಮೂಲಕ ಮೇ ತಿಂಗಳಲ್ಲಿ ಕಂಪನಿಯ ಒಟ್ಟಾರೆಯ ಮಾರಾಟದ ಮೂರನೇ ಒಂದು ಭಾಗವನ್ನು ಹೋಂಡಾ ಅಮೇಜ್ ಸಾಧಿಸಿದೆ. ಕಳೆದ ಎಪ್ರಿಲ್ ತಿಂಗಳಲ್ಲಿ 4,852 ಅಮೇಜ್ ಯುನಿಟ್‌ಗಳು ಮಾರಾಟವಾಗಿದ್ದವು.
ಇನ್ನು ಸರಳವಾಗಿ ಹೇಳುವುದಾದರೆ ಅಮೇಜ್ ಲಾಂಚ್ ಆದ ಮೊದಲ ಏಳು ವಾರಗಳಲ್ಲಿ 1,555 ಯುನಿಟ್‌ಗಳಂತೆ ಮಾರಾಟ ದಾಖಲಿಸಿದೆ. ಅಂದರೆ ಪ್ರತಿ ದಿನವು 200ಕ್ಕಿಂತಲೂ ಹೆಚ್ಚು ಯುನಿಟ್ ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ.
ಕಂಪನಿಯು ಈಗಾಗಲೇ ಹೋಂಡಾ ಅಮೇಜ್ ಕಾಯುವಿಕೆ ಅವಧಿಯನ್ನು ನಾಲ್ಕರಿಂದ ಮೂರು ತಿಂಗಳಿಗೆ ಇಳಿಸುವಲ್ಲಿ ಯಶಸ್ವಿಯಾಗಿದೆ. ಸ್ಟೈಲಿಷ್ ವಿನ್ಯಾಸ, ಗರಿಷ್ಠ ನಿರ್ವಹಣೆ ಹಾಗೂ ಇಂಧನ ಕ್ಷಮತೆ ಇತರ ಕಾರುಗಳಿಂದ ಹೋಂಡಾ ಅಮೇಜನ್ನು ವಿಭಿನ್ನವಾಗಿಸುತ್ತಿದೆ.


Click it and Unblock the Notifications









