ಅಖಿಲೇಷ್ ದೊಡ್ಡತನ; ವಿಜೇತ ಮಕ್ಕಳಿಗೆ ನ್ಯಾನೋ ಗಿಫ್ಟ್
ರಾಜ್ಯಕ್ಕೆ ಮುಖ್ಯಮಂತ್ರಿಯಾದವರು ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸಿಎಂ ಆಗಿ ಆಯ್ಕೆಯಾಗಿರುವ ಯುವ ನೇತಾರ ಅಖಿಲೇಷ್ ಯಾದವ್ ನಿದರ್ಶನವಾಗಿದ್ದಾರೆ.
ದೇಶಿಯ ಕ್ರೀಡೆಗೆ ಪ್ರೋತ್ಸಾಹ ತುಂಬಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಷ್ 58ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದ ವಿಜೇತರಿಗೆ ಟಾಟಾ ನ್ಯಾನೋ ಕಾರು ಕಾಣಿಕೆಯಾಗಿ ನೀಡುವ ಮೂಲಕ ಶಭಾಷ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ.
ಇದೀಗಷ್ಟೇ ಅಂತ್ಯಗೊಂಡ ರಾಷ್ಟ್ರ ಮಟ್ಟದ ಶಾಲಾ ಕ್ರೀಡೋತ್ಸವಕ್ಕೆ ಉತ್ತರ ಪ್ರದೇಶದ ಇಟಾವಾ ಆತಿಥ್ಯ ವಹಿಸಿತ್ತು. ಇದರಂತೆ ಯುವ ರಾಜನೀತಿ ಎನಿಸಿಕೊಂಡಿರುವ ಅಖಿಲೇಷ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರನ್ನು ನ್ಯಾನೋ ಕಾರು ನೀಡುವ ಮೂಲಕ ಗೌರವಿಸಿದ್ದಾರೆ.
ಈ ನಡುವೆ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದವರಿಗೆ ಅಖಿಲೇಷ್ ತಂದೆಯವರಾದ ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ 21,000 ರು.ಗಳ ನಗದು ಬಹುಮಾನ ಘೋಷಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡಿದ್ದಾರೆ.
ಇದರಂತೆ ಅಥ್ಲೆಟಿಕ್ಸ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಕೇರಳ ಪಿಯು ಚಿತ್ರ ಹಾಗೂ ಮಹಾರಾಷ್ಟ್ರದ ಅಂಜನಾ ಥಾಮ್ಕೆ ನ್ಯಾನೋ ಉಡುಗೊರೆ ಪಡೆದುಕೊಂಡಿದ್ದಾರೆ. ಹಾಗೆಯೇ ವಿವಿಧ ಸ್ಪರ್ಧೆಗಳಲ್ಲಿ ನೂತನ ದಾಖಲೆ ನಿರ್ಮಿಸಿರುವ 18 ಕ್ರೀಡಾಪಟುಗಳಿಗೆ 21,000 ನಗದು ಬಹುಮಾನ ನೀಡಿ ಸನ್ಮಾನಿಸಲಾಗಿದೆ. ನಗದು ಬಹುಮಾನ ಸ್ವೀಕಾರ್ಯವಲ್ಲದಿದ್ದಲ್ಲಿ ಉಡುಗೊರೆಯನ್ನು ಸೈಕಲ್ ರೂಪದಲ್ಲೂ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು.


Click it and Unblock the Notifications
