ಬಂದಿದೆ ಅಶೋಕ್ ಲೇಲ್ಯಾಂಡ್ ಮ್ಯಾಜಿಕಲ್ ಬಸ್

Posted By:

ದೇಶದ ಪುರಾತನ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಅಶೋಕ್ ಲೇಲ್ಯಾಂಡ್ ಭಾರತೀಯ ಸೇನೆಗೆ ವಾಹನಗಳನ್ನು ಕೊಡುಗೆ ಮಾಡುವುದರಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. (ಫೋಟೋಸ್ ಕೃಪೆ: ಇಂಡಿಯನ್ ಆಟೋಸ್ ಬ್ಲಾಗ್ ಡಾಟ್ ಕಾಮ್)

1948ನೇ ಇಸವಿಯಿಂದ ದೇಶದಲ್ಲಿ ನೆಲೆಯೂರಿರುವ ಚೆನ್ನೈ ಮೂಲದ ಈ ಕಂಪನಿ ಇದೀಗ ದೇಶಕ್ಕೆ ಅತಿ ನೂತನ ಬಸ್ ಪರಿಚಯಿಸುತ್ತಿದೆ. ಪ್ರಸ್ತುತ ದೆಹಲಿಯಲ್ಲಿ ಮಾತ್ರ ಲಭ್ಯವಿರುವ ಈ ಲಕ್ಸುರ ಮ್ಯಾಜಿಕಲ್ ಬಸ್ ಸದ್ಯದಲ್ಲೇ ನಮ್ಮ ಬೆಂಗಳೂರಿಗೂ ಆಗಮಿಸುವ ನಿರೀಕ್ಷೆಯಿದೆ.

ಹಾಗಿದ್ದರೆ ಅಶೋಕ್ ಲೇಲ್ಯಾಂಡ್ ಬಸ್ ಬಗ್ಗೆ ಫೋಟೊ ಫೀಚರ್ ಮೂಲಕ ಹೆಚ್ಚು ತಿಳಿದುಕೊಳ್ಳೋಣ...

Ashok Leyland Luxura Magical India Bus

ಅಶೋಕ್ ಲೇಲ್ಯಾಂಡ್ ಬಸ್ಸಿನ ನಿರ್ವಹಣೆ ಹಾಗೂ ಬುಕ್ಕಿಂಗ್ ಪ್ರಕ್ರಿಯೆಯನ್ನು ಮಾನ್ ಟ್ರಾವೆಲ್ಸ್ ವಹಿಸಲಿದೆ.

Ashok Leyland Luxura Magical India Bus

ಎಂಟು ಗಂಟೆಗಳ ಅವಧಿಗೆ ಬಸ್ ಮುಂಗಡವಾಗಿ ಕಾಯ್ದಿರಿಸಲು 30 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ. ಇದು ಮೂರು ಮರ್ಸಿಡಿಸ್ ಎಸ್ ಕ್ಲಾಸ್ ಕ್ಯಾಬ್‌ಗಳನ್ನು ಬುಕ್ ಮಾಡುವುದಕ್ಕೆ ಸಮಾನವಾಗಿದೆ. ಆದರೆ ಮರ್ಸಿಡಿಸ್‌ನಲ್ಲಿ ನಿಮಗೆ ವಾಶ್ ರೂ, ಸ್ಪಾ ಹಾಗೂ ಕಿಚನ್ ಸೌಲಭ್ಯಗಳು ಲಭ್ಯವಿರುವುದಿಲ್ಲ.

Ashok Leyland Luxura Magical India Bus

ಪ್ರವಾಸಿಗಳು ಒಂದು ದಿನದ ಪಯಣಕ್ಕಾಗಿ ದೆಹಲಿ ಆಸುಪಾಸಿನ ಆಗ್ರಾ, ಜೈಪುರ ಹಾಗೂ ನಿಮ್‌ರಾನ ಪ್ರವಾಸಿ ಕೇಂದ್ರಗಳನ್ನು ಆಯ್ಕೆ ಮಾಡಬಹುದಾಗಿದೆ.

ವಿನ್ಯಾಸ ಹಾಗೂ ಇಂಟಿರಿಯರ್

ವಿನ್ಯಾಸ ಹಾಗೂ ಇಂಟಿರಿಯರ್

ಎಕ್ಸ್‌ಟೀರಿಯರ್ ಸೇರಿದಂತೆ ಇಂಟಿರಿಯರ್ ಭಾಗಗಳನ್ನು ಡಿಸಿ ಡಿಸೈನ್ ವಿನ್ಯಾಸಗೊಳಿಸಿದೆ. ಆಂತರಿಕ ಭಾಗಗಳಲ್ಲಿ ಆಕರ್ಷಕ ಬಿಡಿ ಭಾಗಗಳನ್ನು ಜೋಡಣೆ ಮಾಡಲಾಗಿದೆ. ಇದರಲ್ಲಿ ವಾಶ್ ರೂಂ/ಬಾತ್ ರೂಂ, ಸ್ಪಾ ಇರಲಿದೆ. ಹಾಗೆಯೇ ಕಿಚನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಲಭ್ಯವಿದ್ದು, ಮೈಕ್ರೋವೇವ್, ಕಾಫಿ ತಯಾರಿಸುವ ಮೆಷಿನ್ ಹಾಗೂ ಫ್ರಿಡ್ಜ್ ಇರಲಿದೆ.

Ashok Leyland Luxura Magical India Bus

ಲಕ್ಸುರ ಫ್ಲಾಟ್‌ಫಾರ್ಮ್‌ನಲ್ಲಿ ಈ ಅದ್ದೂರಿ ಬಸ್ ತಯಾರಿಸಲಾಗಿದೆ. ಇದರ ಎಂಜಿನ್ 225 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಏರ್ ಸಸ್ಪೆಷನ್ ಪ್ರಾಯಾಣಿಕರಿಗೆ ಸುಖ ಪ್ರಯಾಣ ಪ್ರದಾನ ಮಾಡಲಿದೆ.

Ashok Leyland Luxura Magical India Bus

ಪ್ರತಿಯೊಂದು ಸೀಟ್‌ಗೂ ವೈಯಕ್ತಿಕ ರಿಮೋಟ್ ಲಭ್ಯವಿರಲಿದೆ. ಹಾಗೆಯೇ ವೈರಲೆಸ್ ಇಂಟೆರ್‌ನೆಟ್ ಕನೆಕ್ಟಿವಿಟಿ ನಿಮಗೆ ಸಣ್ಣ ಆಫೀಸ್ ಪ್ರದಾನ ಮಾಡಲಿದೆ.

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್

English summary
Ashok Leyland provided its platform from the ‘Luxura’ line of buses. The service is available in Delhi right now and will be expanded to other cities soon.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark