ಜುಲೈ 16ಕ್ಕೆ ಅಶೋಕ್ ಲೇಲ್ಯಾಂಡ್ ಸ್ಟೈಲ್ ಬಿಡುಗಡೆ
ದೇಶದ ಘನ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಶೋಕ್ ಲೇಲ್ಯಾಂಡ್ ಇದೀಗ ಮಲ್ಟಿ ಪರ್ಪಸ್ ವೆಹಿಕಲ್ ಪ್ರಯಾಣಿಕ ಸೆಗ್ಮೆಂಟಿಗೂ ಕಾಲಿರಿಸಿದ್ದು, ನೂತನ ಸ್ಟೈಲ್ ಕಾರನ್ನು ಜುಲೈ 16ರಂದು ಬಿಡುಗಡೆಗೊಳಿಸಲಿದೆ.
ಎಂಟು ಸೀಟಿನ ಸ್ಟೈಲ್ ಎಂಪಿವಿ ಡೀಸೆಲ್ ಜತೆಗೆ ಪೆಟ್ರೋಲ್ ಸೇರಿದಂತೆ ಸಿಎನ್‌ಜಿ ಕಿಟ್ ಆಯ್ಕೆಯಲ್ಲಿ ಆಗಮನವಾಗುವ ನಿರೀಕ್ಷೆಗಳಿವೆ.
ಪ್ರಸ್ತುತ ಲೇಲ್ಯಾಂಡ್, ಎಂಟ್ರಿ ಲೆವೆಲ್ ಎಂಪಿವಿ ಕಾರುಗಳಿಗೆ ನಿಕಟ ಪೈಪೋಟಿ ನೀಡಲಿದೆ. ಈ ಹಿಂದೆ 2012 ದೆಹಲಿ ಆಟೋ ಶೋದಲ್ಲಿ ನಿಸ್ಸಾನ್ ಇವಾಲಿಯಾ ಎಂಪಿವಿ ವರ್ಷನ್ ಅನ್ನು ಅಶೋಕ್ ಲೇಲ್ಯಾಂಡ್ ಪ್ರದರ್ಶಿಸಿತ್ತು. ಇದೀಗ ಒಂದು ವರೆ ವರ್ಷದ ಬಳಿಕ ರಿ ಬ್ಯಾಡ್ಜ್ ಪಡೆದ ಇವಾಲಿಯಾ ಎಂಪಿವಿ ಕಾರನ್ನು ಸ್ಟೈಲ್ ರೂಪದಲ್ಲಿ ಬಿಡುಗಡೆಗೊಳಿಸುತ್ತಿದೆ.
ಇದು ನೂತನ ಗ್ರಿಲ್, ಹೆಡ್ ಲ್ಯಾಂಪ್, ಹೊಸ ವೀಲ್, ಹಸಿರು ಹಾಗೂ ನೀಲಿ ಸ್ಟಿಕ್ಕರ್‌ಗಳನ್ನು ಪಡೆಯಲಿದೆ. ಹಾಗೆಯೇ 1.5 ಲೀಟರ್ ಡಿಸಿಐ ಡೀಸೆಲ್ ಎಂಜಿನ್, ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ. ಅಂದ ಹಾಗೆ ಸ್ಟೈಲ್ ಪೆಟ್ರೋಲ್ ಎಡಿಷನ್ ಕೂಡಾ ಅಶೋಕ್ ಲೇಲ್ಯಾಂಡ್ ಲಾಂಚ್ ಮಾಡಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ಅಶೋಕ್ ಲೇಲ್ಯಾಂಡ್ ಸ್ಟೈಲ್ ಎಂಪಿವಿ, ಕೌಟುಂಬಿಕ ಹಾಗೂ ಟ್ಯಾಕ್ಸಿ ಆಧಾರಿತ ವಾಹನವಾಗಿದೆ. ಇನ್ನು ಇದರ ದರ ಇವಾಲಿಯಾಗಿಂತಲೂ ಕಡಿಮೆಯಿರುವ ಸಾಧ್ಯತೆಯಿದೆ. ಇದು ಮೂರು ಸಾಲುಗಳ ಸಿಟ್ಟಿಂಗ್ ವ್ಯವಸ್ಥೆ ಪಡೆಯಲಿದೆ. ಇದು ಷೆವರ್ಲೆ ತವೆರಾ ಹಾಗೂ ಮಹೀಂದ್ರ ಕ್ಸೈಲೋಗೆ ಪ್ರತಿಸ್ಪರ್ಧಿ ಎನಿಸಲಿದೆ.


Click it and Unblock the Notifications









