ವೈಶಿಷ್ಟ್ಯಗಳಿಗೆ ಕತ್ತರಿ; ಆಡಿ ಎ4 ಸೆಲೆಬ್ರೇಷನ್ ಲಾಂಚ್
ಮರ್ಸಿಡಿಸ್ ಬೆಂಝ್ ಒಂದೆಡೆ ಸಿ ಕ್ಲಾಸ್ ಸೆಡಾನ್ ಲಗ್ಫುರಿ ಕಾರು ಲಾಂಚ್ ಮಾಡಿದ್ದರೆ ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಮುಂದೆ ಬಂದಿರುವ ಜರ್ಮನಿ ಮೂಲದ ಇನ್ನೊಂದು ಕಾರು ತಯಾರಕ ಸಂಸ್ಥೆಯಾದ ಆಡಿ, ಎ4 ಸೆಲೆಬ್ರೇಷನ್ ಎಡಿಷನ್ ಲಾಂಚ್ ಮಾಡಿದೆ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ಹೆಸರಲ್ಲೇ ಸೂಚಿಸಿರುವಂತೆಯೇ ಆಡಿ ಎ4 ಸೀಮಿತ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿರಲಿದೆ. ಇದರ ದರ 25.99 ಲಕ್ಷ ರು.ಗಳಾಗಿರಲಿದೆ. ಸಾಮಾನ್ಯವಾಗಿ ಸೆಲೆಬ್ರೇಷನ್ ಅಥವಾ ವಿಶೇಷ ಆವೃತ್ತಿಗಳು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಆಗಮನವಾಗುತ್ತದೆ. ಆದರೆ ದರ ಕಡಿತಗೊಳಿಸುವ ನಿಟ್ಟಿನಲ್ಲಿ ಆಡಿ ತನ್ನ ಕೆಲವೊಂದು ಮಹತ್ವದ ಸೌಲಭ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದೆ. ಈ ಮೂಲಕ ಸ್ಮರ್ಧಾತ್ಮಕ ದರಗಳಲ್ಲಿ ಮಾರಾಟ ತಂತ್ರ ಅನುಸರಿಸುತ್ತಿದೆ.

ಅಂದರೆ ನೂತನ ಆಡಿ ಎ4 ಸೆಲೆಬ್ರೇಷನ್ ಎಡಿಷನ್, ಸನ್‌ರೂಫ್, ಹೊರಗಿನ ಮಿರರ್, ವುಡನ್ ಇಂಟಿರಿಯರ್, ಫ್ರಂಟ್ ಪ್ಯಾಸೆಂಜರ್ ಸೀಟು, ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು 17 ಇಂಚುಗಳ ಅಲಾಯ್ ವೀಲ್ ಸೌಲಭ್ಯಗಳಿಂದ ವಂಚಿತವಾಗಲಿದೆ.
ಹಾಗಿದ್ದರೂ ಎಂಟು ಏರ್ ಬ್ಯಾಗ್, ಬೈ ಕ್ಸೆನಾನ್ ಹೆಡ್ ಲ್ಯಾಂಪ್ ಜತೆ ಡೇ ಲೈಟ್ ರನ್ನಿಂಗ್ ಲೈಟ್, ಬ್ಲ್ಯೂ ಟೂತ್ ಆಡಿಯೋ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು 16 ಇಂಚು ಅಲಾಯ್ ವೀಲ್ ಲಭ್ಯವಿರಲಿದೆ.
ನೂತನ ಆಡಿ ಎ4 ಸೆಲೆಬ್ರೇಷನ್ ಎಡಿಷನ್ 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 140 ಪಿಎಸ್ ಪವರ್ (320 ಎನ್‌ಎಂ ಟಾರ್ಕ್) ಉತ್ಪಾದಿಸಲಿದ್ದು, ಕಡಿಮೆ ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಅಂದ ಹಾಗೆ ಸೀಮಿತ 500 ಯುನಿಟ್ ಮಾತ್ರ ಲಭ್ಯವಿರಲಿದೆ. ಸಾಮಾನ್ಯ ಎ4 ಆವೃತ್ತಿಗಳ ದರ 29.81 ಲಕ್ಷ ರು.ಗಳಾಗಿವೆ.


Click it and Unblock the Notifications








