ಆಡಿ ಎ8 ಐಷಾರಾಮಿ ಕಾರು ಅನಾವರಣ

By Nagaraja

ಹೊಸ ರೂಪ ಪಡೆದುಕೊಂಡಿರುವ ನೂತನ ಆಡಿ ಎ8 ಫೇಸ್‌ಲಿಫ್ಟ್ ಐಷರಾಮಿ ಕಾರನ್ನು ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಆಡಿ ಅನಾವರಣಗೊಳಿಸಿದೆ. ಇದು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ನೂತನ ಆಡಿ ಎ8 ಪವರ್‌ಫುಲ್ ಎಂಜಿನ್ ಜತೆ ಹೊಸ ಆಕರ್ಷಕ ಎಲ್‌ಇಡಿ ಹೆಡ್ ಲೈಟ್ ತಂತ್ರಜ್ಞಾನ ಪಡೆದುಕೊಂಡಿದೆ. ಈ ಹಿಂದೆ ಹಲವು ಬಾರಿ ಟೆಸ್ಟಿಂಗ್ ವೇಳೆ ಸೆರೆಸಿಕ್ಕ ಆಡಿ ಎ8 ಇದೀಗ ನೂತನ ಲುಕ್‌ನಲ್ಲಿ ಆಗಮನವಾಗುತ್ತಿದೆ.


ಪರಿಷ್ಕೃತ ಆಡಿ8 ಜಾಗತಿಕವಾಗಿ ಫ್ರಂಟ್ ವೀಲ್ ಜತೆಗೆ ಆಲ್ ವೀಲ್ ಡ್ರೈವ್ ಆಪ್ಷನ್‌ಗಳಲ್ಲಿ ಲಭ್ಯವಿದೆ. ಪ್ರಸ್ತುತ ಆಡಿ8 ಐಷಾರಾಮಿ ಕಾರು ಮುಂಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಾಣಲಿದೆ. ಹೊಸತಾದ ಎಲ್‌ಇಡಿ ತಂತ್ರಗಾರಿಕೆಯು ಮ್ಯಾಟ್ರಿಕ್ಸ್ ಬೀಮ್ ಎಂಬುದಾಗಿ ಅರಿಯಲ್ಪಡಲಿದೆ. ಇದರ ಜತೆಗೆ ಫ್ರಂಟ್ ಹಾಗೂ ರಿಯರ್ ಬಂಪರ್, ಬೊನೆಟ್, ಫ್ರಂಟ್ ಗ್ರಿಲ್, ಎಲ್‌ಇಡಿ ರಿಯರ್ ಲೈಟ್, ನ್ಯೂ ಬೂಟ್ ಲೇಔಟ್ ಕೂಡಾ ಆಳವಡಿಸಲಾಗುತ್ತಿದೆ.

ನೂತನ ಆಡಿ ಎ8 ಲಗ್ಷುರಿ ಕಾರು, 3.0 ಲೀಟರ್ ವಿ6, 4.0 ಲೀಟರ್ ವಿ8, 6.3 ಲೀಟರ್ ಡಬ್ಲ್ಯು 12 ಹಾಗೂ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು ಇದು ಅನುಕ್ರಮವಾಗಿ 306, 429, 493 ಹಾಗೂ 513 ಅಶ್ವಶಕ್ತಿಗಳನ್ನು ಉತ್ಪಾದಿಸಲಿದೆ. ಹಾಗೆಯೇ 3.0 ಲೀಟರ್ ಡಿಟಿಐ, 4.2 ಲೀಟರ್ ಟಿಡಿಐ ಡೀಸೆಲ್ ಎಂಜಿನ್‌ಗಳು ಅನುಕ್ರಮವಾಗಿ 254 ಹಾಗೂ 380 ಹಾರ್ಸ್ ಪವರ್ ಉತ್ಪಾದಿಸಲಿದೆ. ಅದೇ ಹೊತ್ತಿಗೆ ಆಡಿ ಎ8 ಹೈಬ್ರಿಡ್ ವರ್ಷನ್, 2.0 ಲೀಟರ್ ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್ ಜತೆಗೆ ವಿದ್ಯುನ್ಮಾನ ಚಾಲಿತ ಮೋಟಾರು ಪಡೆಯಲಿದೆ.

More from DriveSpark

Article Published On: Sunday, August 25, 2013, 11:43 [IST]
English summary
Audi A8 facelift revealed. Expect Audi to launch the A8 facelift in India soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+