ಬಜಾಜ್ ಆಟೋ ಪೆಟ್ರೋಲ್, ಸಿಎನ್‌ಜಿ, ಎಲ್‌ಪಿಜಿಗಳಲ್ಲಿ ಲಭ್ಯ
ವಿಶ್ವದ ಅತಿದೊಡ್ಡ ತ್ರಿಚಕ್ರ ವಾಹನ ತಯಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಜಾಜ್ ಆಟೋ ಲಿಮೆಟೆಡ್, ಇದೀಗ ನೂತನ ಆರ್‌ಇ ಕಾಂಪಾಕ್ಟ್ ತ್ರಿಚಕ್ರ ಪ್ರಯಾಣಿಕ ವಾಹನವನ್ನು ಬಿಡುಗಡೆಗೊಳಿಸಿದೆ. ಇದು ಪೆಟ್ರೋಲ್ ಸೇರಿದಂತೆ ಸಿಎನ್‌ಜಿ ಹಾಗೂ ಎಲ್‌ಪಿಜಿ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ.
ಕಂಪನಿಯ ಪ್ರಕಾರ ಡೀಸೆಲ್ ವೆರಿಯಂಟ್ ಸದ್ಯದಲ್ಲೇ ಆಗಮನವಾಗಲಿದೆ. ಗರಿಷ್ಠ ಇಂಧನ ದಕ್ಷತೆ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಆಧುನಿಕ ಫೀಚರ್ಸ್ ನೂತನ ಆಟೋ ರಿಕ್ಷಾದ ವಿಶೇಷತೆಯಾಗಿದೆ.
ಇದರ ಟು ಸ್ಟ್ರೋಕ್ ಪೆಟ್ರೋಲ್ ಎಂಜಿನ್ ವೆರಿಯಂಟ್ ದರವು 1.03 ಲಕ್ಷ ರು.ಗಳಾಗಿವೆ. ಅದೇ ಹೊತ್ತಿಗೆ ಫೋರ್ ಸ್ಟ್ರೋಕ್ ವೆರಿಯಂಟ್ ದರ 1.15 ಲಕ್ಷ ರು. ನಿಗದಿಯಾಗಿದೆ. ಒಟ್ಟು ಏಳು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.
ಕಂಪನಿಯ ಪ್ರಕಾರ ನೂತನ ಆರ್‌ಇ ಕಾಂಪಾಕ್ಟ್ ವಾಹನದಿಂದ ಶೇಕಡಾ 10ರಿಂದ 15ರಷ್ಟು ಇಂಧನ ಉಳಿತಾಯ ಮಾಡಲು ಸಾಧ್ಯವಾಗಲಿದ್ದು, ಇದರಿಂದ ವಾರ್ಷಿಕವಾಗಿ 20,000 ರು.ಗಳನ್ನು ಉಳಿತಾಯ ಮಾಡಬಹುದಾಗಿದೆ.
ಒಟ್ಟಿನಲ್ಲಿ ಆಟೋ ರಿಕ್ಷಾಗಳನ್ನೇ ಅವಲಂಬಿಸಿ ಜೀವಿಸುತ್ತಿರುವ ನಮ್ಮ ಮಧ್ಯಮ ವರ್ಗದ ಜನರಿಗೆ ಈ ನೂತನ ಆರ್‌ಇ ಕಾಂಪಾಕ್ಟ್ ವಾಹನ ತುಂಬಾ ಉಪಯುಕ್ತವೆನಿಸಲಿದೆ.


Click it and Unblock the Notifications









