ಬಜಾಜ್ ಆರ್‌ಇ60 ಅಗ್ಗದ ಕಾರು ಅಲ್ಲವಂತೆ, ಇನ್ನೇನು?

By Nagaraja

ಟಾಟಾ ಮೋಟಾರ್ಸ್ ಹೇಳಿಕೆಯ ಒಂದು ದಿನದ ಬಳಿಕ ತಿರುಗೇಟು ನೀಡಿರುವ ಬಜಾಜ್ ಆಟೋ, ಬಹುನಿರೀಕ್ಷಿತ 'ಆರ್‌ಇ60' ಅಗ್ಗದ ಕಾರು ಅಲ್ಲ ಎಂದು ಸ್ಪಷ್ಟನೆ ನೀಡಿದೆ.

ಖಂಡಿತವಾಗಿಯೂ ಬಜಾಜ್ ಆರ್‌ಇ60 ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿರುವ ಪ್ರಯಾಣಿಕ ಕಾರು ಅಲ್ಲ. ಬದಲಾಗಿ ತ್ರಿಚಕ್ರ ವಾಹನದ ಸುಧಾರಿತ ರೂಪವಾಗಿದೆ ಎಂದು ತಿಳಿಸಿದೆ.

ಕಳೆದ ದಿನವಷ್ಟೇ ಕ್ವಾಡ್ರಾಸೈಕಲ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಬಜಾಜ್ ನಾಲ್ಕು ಚಕ್ರದ ಸಣ್ಣ ವಾಹನಕ್ಕೆ ಸರಕಾರ ಮಾನ್ಯತೆ ನೀಡುವುದರ ಬಗ್ಗೆ ಟಾಟಾ ಮೋಟಾರ್ಸ್ ತಗಾದೆ ಎತ್ತಿತ್ತು. ಇದರ ವಿರುದ್ಧ ಬಜಾಜ್ ಆಟೋ ಪ್ರತಿಕ್ರಿಯಿಸಿದೆ.

ಟಾಟಾ ನ್ಯಾನೋ ಬೇಡಿಕೆ ಕುಸಿದಿರುವುದೇ ಗ್ರಾಹಕರು ಅಗ್ಗದ ಕಾರಿನತ್ತ ಆಕರ್ಷಿತರಾಗಿಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ಬಜಾಜ್ ಆಟೋ ವಕ್ತಾರ ತಿಳಿಸಿದ್ದಾರೆ.

ಕ್ವಾಡ್ರಾಸೈಕಲ್ ವಾಹನ ರಸ್ತೆಯಲ್ಲಿ ಸಂಚರಿಸುವುದಕ್ಕೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದಂತೆ ಸರಕಾರ ಸಮಿತಿಯೊಂದನ್ನು ನೇಮಕಗೊಳಿಸಿದ್ದು, ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಸಮಿತಿ ನೀಡುವ ವರದಿಯನ್ನು ಆಧಾರದ ಮೇಲೆ ಸರಕಾರದ ನಿರ್ಧಾರ ಪ್ರಕಟವಾಗಲಿದೆ.

More from DriveSpark

Article Published On: Saturday, April 27, 2013, 10:26 [IST]
English summary
A day after Tata Motors Managing Director Karl Slym questioned the need for quadricycles, Pune-based Bajaj Auto, which is pioneering the quadricycle project, said its RE60 wasn’t a low-cost car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+