127 ಬಿಎಂಟಿಸಿ ಬಸ್ ನಿಲ್ದಾಣಗಳ ತೆರವು

ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್ ಸಮೀಪದ ಬಸ್ ತಂಗುದಾಣಗಳನ್ನು ತೆರವುದೊಳಿಸಲು ಕೊನಗೊ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದ್ದು, ನಗರ ಪೊಲೀಸ್ ಇಲಾಖೆ ಸಂಚರಿಸುವ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರಂತೆ ಮಲ್ಲೇಶ್ವರ, ಸದಾಶಿವನಗರ, ಬನಶಂಕರಿ, ಚಾಮರಾಜಪೇಟೆ ಸೇರಿದಂತೆ 127 ಬಸ್ ನಿಲ್ದಾಣಗಳನ್ನು ತೆರವುಗೊಳಿಸಲಾಗುವುದು.

ಟ್ರಾಫಿಕ್ ಸಿಗ್ನಲ್ ಬಳಿ ಬಸ್ ತಂಗುದಾಣಗಳಿರುವ ಕಾರಣ ಸಂಚಾರಕ್ಕೆ ಅಡಚಣೆಯಾಗಿದೆ. ಇಲ್ಲಿ ಹಸಿರು ದೀಪ ಬೆಳಗಿದರೂ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ನಿಟ್ಟಿನಲ್ಲಿ ನಿಲ್ದಾಣ ತೆರವುಗೊಳಿಸುವ ನಿರ್ಧಾರಕ್ಕೆ ಪಾಲಿಕೆ ಮುಂದಾಗಿದೆ. ಈ ಸಂಬಂಧ ಈ ಹಿಂದೆಯೂ ಹಲವು ಬಾರಿ ಮನವರಿಕೆ ಮಾಡಿದ್ದರೂ ಪಾಲಿಕೆಯಿಂದ ಸೂಕ್ತ ಸ್ಪಂದನೆ ದೊರಕಿರಲಿಲ್ಲ.

ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಪೊಲೀಸರ ಕ್ರಮಕ್ಕೆ ಸಂಪೂರ್ಣ ಸಹಕಾರವಿರುವುದಾಗಿ ಬಿಬಿಎಂಪಿ ತಿಳಿಸಿದೆ. ಇದರಂತೆ ಟ್ರಾಫಿಕ್ ಸಿಗ್ನಲ್ ಸಮೀಪವಿರುವ 127 ಬಸ್ ನಿಲ್ದಾಣಗಳ ತೆರವು ಕಾರ್ಯ ನಡೆಯುತ್ತಿದೆ.

ಏತನ್ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 63 ಕೋಟಿ ರು. ವೆಚ್ಚದಲ್ಲಿ ಏಳು ನೂತನ ಬಸ್ ಡಿಪೋ, 12 ನೂತನ ಬಸ್ ನಿಲ್ದಾಣಗಳನ್ನು ಸ್ಥಾಪಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಹಾಗೆಯೇ ಪ್ರಸಕ್ತ ಸಾಲಿನಲ್ಲಿ 1,139 ಹೊಸ ಬಸ್‌ಗಳ ಆಗಮನವಾಗಲಿದೆ.

More from DriveSpark

Article Published On: Monday, July 22, 2013, 16:17 [IST]
English summary
The Bangalore Metropolitan Transport Corporation (BMTC) has agreed to shift 127 bus stands situated near traffic signals.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+