ಅಗ್ಗದ ಬೆಂಝ್‌ಗೆ 10 ದಿನಗಳಲ್ಲೇ 400ಕ್ಕೂ ಹೆಚ್ಚು ಬುಕ್ಕಿಂಗ್ಸ್
ಬೆಂಝ್ ಎ-ಕ್ಲಾಸ್ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಆಗಮನವಾಗುತ್ತಿರುವಂತೆಯೇ ಭಾರಿ ಬೇಡಿಕೆ ಕಂಡುಬಂದಿದ್ದು, ಬಿಡುಗಡೆಯಾದ ಕೇವಲ 10 ದಿನಗಳಲ್ಲೇ 400ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಿಸುವ ಮೂಲಕ ಉತ್ತಮ ಮಾರಾಟ ಕಾಯ್ದುಕೊಂಡಿದೆ.
ಈ ಮೂಲಕ ಕಳೆದೊಂದು ದಶಕದಲ್ಲೇ ಅತಿ ಹೆಚ್ಚು ಯಶಸ್ಸನ್ನು ಅನುಭವಿಸಿರುವ ಬೆಂಝ್ ಮಾಡೆಲ್ ಎಂಬ ಹೆಗ್ಗಳಿಕೆಗೆ ಈ ಐಷಾರಾಮಿ ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಪಾತ್ರವಾಗಿದೆ. ಪ್ರಮುಖವಾಗಿಯೂ ದೇಶದ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಬೆಂಝ್ ಎ ಕ್ಲಾಸ್ ಲಾಂಚ್ ಮಾಡಲಾಗಿತ್ತು. ಇದರ ಆರಂಭಿಕ ದರ 22 ಲಕ್ಷ ರು. ಆಗಿದೆ.
ಆರಾಮದಾಯಕ ಪಯಣ, ಕ್ರೀಡಾ ವಿನ್ಯಾಸ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ಹಾಗೂ ಗರಿಷ್ಠ ನಿರ್ವಹಣೆಯನ್ನು ನೂತನ ಎ ಕ್ಲಾಸ್ ಖಾತ್ರಿಪಡಿಸುತ್ತದೆ. ಇದು ದೇಶಕ್ಕೆ ಪರಿಚಯವಾಗಿರುವ ಪೈಕಿ ಗರಿಷ್ಠ ಇಂಧನ ಕ್ಷಮತೆಯುಳ್ಳ ಲಗ್ಷುರಿ ಕಾರಾಗಿದ್ದು, ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿದರೆ 1000 ಕೀ.ಮೀ. ತನಕ ಸರಾಗವಾಗಿ ಚಲಿಸಬಹುದಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳನ್ನು ಬೆಂಝ್ ಎ ಕ್ಲಾಸ್ ದೊರಕುತ್ತಿದ್ದು, ಇದರ ಎ 180 ಸಿಡಿಐ ಸ್ಟೈಲ್ ಹಾಗೂ ಎ 180 ಸ್ಪೋರ್ಟ್ಸ್ ಎಂಜಿನ್ ಪ್ರತಿ ಲೀಟರ್‌ಗೆ ಅನುಕ್ರಮವಾಗಿ 20.06 ಹಾಗೂ 15.50 ಕೀ.ಮೀ. ಗರಿಷ್ಠ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.


Click it and Unblock the Notifications
