ಬೆಂಝ್, ಆಡಿ ಬಳಿಕ ಬಿಎಂಡಬ್ಲ್ಯುನಿಂದ ಅಗ್ಗದ ಲಗ್ಷುರಿ ಕಾರು

By Nagaraja

ಜರ್ಮನಿ ಮೂಲದ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಸೆಪ್ಟೆಂಬರ್ 3ರಂದು ಭಾರತದಲ್ಲಿ 1 ಸಿರೀಸ್ ಅಗ್ಗದ ಐಷಾರಾಮಿ ಕಾರು ಲಾಂಚ್ ಮಾಡುವುದಾಗಿ ಘೋಷಿಸಿದೆ.

ಈ ಮೂಲಕ ದೇಶಕ್ಕೆ ಇನ್ನೊಂದು ಅಗ್ಗದ ಐಷಾರಾಮಿ ಕಾರು ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಇದು ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಎ ಹಾಗೂ ಬಿ ಕ್ಲಾಸ್ ಮತ್ತು ಆಡಿ ಕ್ಯೂ3 ಎಸ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯೆನಿಸಲಿದೆ.

ಕಂಪನಿಯ ಪ್ರಕಾರ ನೂತನ ಬಿಂಎಂಡಬ್ಲ್ಯು 1 ಸಿರೀಸ್ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 20.58 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದರ ಆಟೋ ಸ್ಟಾರ್ಟ್/ಸ್ಟಾರ್ಟ್ ಕ್ರಿಯೆ ಇಂಧನ ದಕ್ಷತೆಯನ್ನು ಹೆಚ್ಚಿಸಲು ನೆರವಾಗಲಿದೆ.

ಬಿಎಂಡಬ್ಲ್ಯು 1 ಸಿರೀಸ್ ಕಾರು, ರಿಯರ್ ವೀಲ್ ಡ್ರೈವ್, ಸ್ಟೆಪ್‌ಟ್ರಾನಿಕ್ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹಾಗೂ ಟ್ವಿನ್ ಪವರ್ ಟರ್ಬೊ ಎಂಜಿನ್ ಹೊಂದಿರಲಿದೆ. ಹಾಗೆಯೇ ಸ್ಪೋರ್ಟಿ ಹಾಗೂ ಡೈನಾಮಿಕ್ ಸಣ್ಣ ಬಿಎಂಡಬ್ಲ್ಯು ಕನೆಕ್ಟಡ್ ಡ್ರೈವ್ ಹೊಂದಿರಲಿದೆ.

ಕಂಪ್ಲೀಟ್ ನೌಕ್ಡ್ ಮುಖಾಂತರ ದೇಶಕ್ಕೆ ಆಮದಾಗಲಿರುವ ಬಿಎಂಡಬ್ಲ್ಯು 1 ಸಿರೀಸ್ ಚೆನ್ನೈನ ಘಟಕದಲ್ಲಿ ಜೋಡಣೆಯಾಗಲಿದೆ. ಇನ್ನು ನೂತನ ಕಾರಿನ ದರ 21 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಇದು ಸಮೀಪ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುವಲ್ಲಿ ನೆರವಾಗಲಿದೆ.

More from DriveSpark

Article Published On: Friday, August 23, 2013, 12:01 [IST]
English summary
German Luxury car maker BMW have announced that they will launch the 1 Series in India on September 3, 2013.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+