ಅಗ್ಗದ ಐಷಾರಾಮಿ ಬಿಎಂಡಬ್ಲ್ಯು 1 ಸಿರೀಸ್ ಲಾಂಚ್

By Nagaraja

ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ದೇಶ ಮಾರುಕಟ್ಟೆಗೆ 1 ಸಿರೀಸ್ ಅಗ್ಗದ ಐಷಾರಾಮಿ ಕಾರನ್ನು ಬಿಡುಗಡೆಗೊಳಿಸಿದೆ. ಈ ಮೂಲಕ 'ಡೈನಾಮಿಕ್1' ಎಂಬ ಪ್ರೀತಿಯ ಅಡ್ಡ ಹೆಸರನ್ನು ಪಡೆದಿರುವ ಬಿಎಂಡಬ್ಲ್ಯು 1 ಸಿರೀಸ್, ಪ್ರೀಮಿಯಂ ಲಗ್ಷುರಿ ಹ್ಯಾಚ್‌ಬ್ಯಾಕ್ ಎಂಬ ನೂತನ ಸೆಗ್ಮೆಂಟ್‌ಗೆ ಎಂಟ್ರಿ ಕೊಟ್ಟಿದೆ.

ದರ ಹಾಗೂ ವೆರಿಯಂಟ್ ಮಾಹಿತಿ:

116ಐ (ಪೆಟ್ರೋಲ್) 20.9 ಲಕ್ಷ ರು.
118ಡಿ (ಡೀಸೆಲ್) 22.9 ಲಕ್ಷ ರು.
118ಡಿ ಸ್ಪೋರ್ಟ್ ಲೈನ್ (ಡೀಸೆಲ್) 25.9 ಲಕ್ಷ ರು.
118ಡಿ ಸ್ಪೋರ್ಟ್ ಪ್ಲಸ್ (ಡೀಸೆಲ್) 29.9 ಲಕ್ಷ ರು.


ನೂತನ ಬಿಎಂಡಬ್ಲ್ಯು 1 ಸಿರೀಸ್, ಇದೀಗಷ್ಟೇ ಮಾರುಕಟ್ಟೆ ಪ್ರವೇಶ ಪಡೆದಿರುವ ಆಡಿ ಕ್ಯೂ3 ಎಸ್, ಮರ್ಸಿಡಿಸ್ ಎ ಹಾಗೂ ಬಿ ಕ್ಲಾಸ್ ಮತ್ತು ವೋಲ್ವೋ ವಿ40 ಕ್ರಾಸ್ ಕಂಟ್ರಿ ಕಾರುಗಳಿಗೆ ನೇರ ಪೈಪೋಟಿ ನೀಡಲಿದೆ. ಚೆನ್ನೈನ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆಯಾಗಲಿರುವುದರಿಂದ ಬಿಎಂಡಬ್ಲ್ಯು 1 ಸಿರೀಸ್ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ನೆರವಾಗಿದೆ. ಚೆನ್ನೈನ ಇದೇ ಘಟಕದಲ್ಲಿ ಬಿಎಂಡಬ್ಲ್ಯು 3 ಸಿರೀಸ್, 5 ಸಿರೀಸ್, 7 ಸಿರೀಸ್, ಎಕ್ಸ್ ಹಾಗೂ ಎಕ್ಸ್3 ಡೀಸೆಲ್ ಕಾರುಗಳು ಸಹ ಜೋಡಣೆಯಾಗುತ್ತಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವೆರಿಯಂಟ್‌ಗಳಲ್ಲಿ 1 ಸಿರೀಸ್ ಆಗಮನವಾಗಿದೆ. ಇದರ 1.6 ಟರ್ಬೊಚಾರ್ಜ್ಡ್ ಪೆಟ್ರೋಲ್ ಹಾಗೂ 2.0 ಲೀಟರ್ ಟ್ವಿನ್ ಪವರ್ ಟರ್ಬೊಡೀಸೆಲ್ ಎಂಜಿನ್ ಅನುಕ್ರಮವಾಗಿ 136 ಹಾಗೂ 143 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

ಮೈಲೇಜ್...
ಬಿಎಂಡಬ್ಲ್ಯು ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ ಪ್ರತಿ ಲೀಟರ್ 16.28 ಕೀ.ಮೀ. ಹಾಗೂ 20.58 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಬಿಎಂಡಬ್ಲ್ಯು1 ಸಿರೀಸ್ ಕಾರಿನಲ್ಲಿ ಉತ್ತಮ ಸ್ಥಳಾವಕಾಶವಿದ್ದು, 360 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಬಿಎಂಡಬ್ಲ್ಯು 1 ಸಿರೀಸ್ ಕಾರು, ರಿಯರ್ ವೀಲ್ ಡ್ರೈವ್, ಸ್ಟೆಪ್‌ಟ್ರಾನಿಕ್ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹಾಗೂ ಟ್ವಿನ್ ಪವರ್ ಟರ್ಬೊ ಎಂಜಿನ್ ಹೊಂದಿರಲಿದೆ. ಹಾಗೆಯೇ ಸ್ಪೋರ್ಟಿ ಹಾಗೂ ಡೈನಾಮಿಕ್ ಸಣ್ಣ ಬಿಎಂಡಬ್ಲ್ಯು ಕನೆಕ್ಟಡ್ ಡ್ರೈವ್ ಹೊಂದಿರಲಿದೆ.

Article Published On: Tuesday, September 3, 2013, 12:51 [IST]
English summary
BMW 1 Series hatch is now the least expensive product on offer by the German brand, a place previously held by X1 compact SUV. Starting price for compact luxury car stands at Rs. 20.9 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+