ಬಿಎಂಡಬ್ಲ್ಯು ಐ8 ತಯಾರಿಗೆ ಎಂ ಎಂಜಿನಿಯರ್‌ಗಳ ಸಹಯೋಗವಿಲ್ಲ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ತನ್ನ ನಿರ್ವಹಣಾ 'ಎಂ' ಮತ್ತು 'ಐ' ಹೈಬ್ರಿಡ್ ಕಾರುಗಳ ವಿಭಾಗದ ನಡುವೆ ಸಹಯೋಗವಿರುವುದಿಲ್ಲ ಎಂಬದನ್ನು ಸ್ಪಷ್ಟಪಡಿಸಿದೆ.

ನಿಮ್ಮ ಮಾಹಿತಿಗಾಗಿ, ಬಿಎಂಡಬ್ಲ್ಯು ಹೈಬ್ರಿಡ್ ಸ್ಪೋರ್ಟ್ಸ್ ಕಾರುಗಳು 'ಐ' ಬ್ಯಾಡ್ಜ್‌ನೊಂದಿಗೆ ಆಗಮನವಾಗುತ್ತಿದೆ. ಇನ್ನೊಂದೆಡೆ 'ಎಂ' ಬ್ಯಾಡ್ಜ್ ಕೂಡಾ ಸೂಪರ್ ಸ್ಪೋರ್ಟ್ಸ್ ಕಾರುಗಳನ್ನು ನಿರ್ಮಿಸುವುದರಲ್ಲಿ ಹೆಸರುವಾಸಿಯಾಗಿದೆ. ಹಾಗಿದ್ದರೂ 'ಎಂ' ವಿಭಾಗದ ಯಾವುದೇ ಎಂಜಿನಿಯರ್ 'ಐ' ಕಾರುಗಳ ಉತ್ಪಾದನೆಯಲ್ಲಿ ತೊಡುಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಈ ಹಿಂದೆ ಬಿಎಂಡಬ್ಲ್ಯು ಎಂ ವಿಭಾಗದ ಸಹಯೋಗದೊಂದಿಗೆ 'ಎಂಐ8' ಕಾರು ತಯಾರಾಗಲಿದೆಯೆಂಬ ಊಹಾಪೋಹಗಳಿದ್ದವು. ಆದರೆ 'ಎಂ' ಸಬ್ ಬ್ರಾಂಡ್ ಎಂಜಿಯರ್‌ಗಳು ಐ8 ಅಭಿವೃದ್ಧಿಯಲ್ಲಿ ತೊಡಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಬಿಎಂಡಬ್ಲ್ಯು, 'ಐ' ಕಾರುಗಳು ವಿಭಿನ್ನವಾಗಿ ಗುರುತಿಸಿಕೊಳ್ಳಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಬಿಎಂಡಬ್ಲ್ಯು ಐ8 ತಯಾರಿಗೆ ಎಂ ಎಂಜಿನಿಯರ್‌ಗಳ ಸಹಯೋಗವಿಲ್ಲ

'ಎಂ' ಹಾಗೂ 'ಐ' ಸಬ್ ಬ್ರಾಂಡ್‌ಗಳ ನಡುವೆ ಯಾವುದೇ ರೀತಿಯ ಸ್ಪರ್ಧೆ ಏರ್ಪಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಬಿಎಂಡಬ್ಲ್ಯು, ಎರಡು ವಿಭಿನ್ನ ಗುರುತುಗಳನ್ನು ಹೊಂದಿದ್ದು, 'ಐ8' ಎಂಬುದು ಸ್ಪೋರ್ಟ್ಸ್ ಕಾರಾಗಿರಲಿದೆ ಎಂದಿದೆ.

ಬಿಎಂಡಬ್ಲ್ಯು ಐ8 ತಯಾರಿಗೆ ಎಂ ಎಂಜಿನಿಯರ್‌ಗಳ ಸಹಯೋಗವಿಲ್ಲ

ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿರುವ ಬಿಎಂಡಬ್ಲ್ಯು 'ಐ8' ವಿದ್ಯುತ್ ಚಾಲಿತ ವಾಹನವಾಗಿದ್ದು, ಇದರ ಕೆಲವೊಂದು ನಿರ್ವಹಣಾ ಮಾನದಂಡಗಳು 'ಎಂ3' ಕಾರನ್ನು ಹೋಲುತ್ತದೆ.

ಬಿಎಂಡಬ್ಲ್ಯು ಐ8 ತಯಾರಿಗೆ ಎಂ ಎಂಜಿನಿಯರ್‌ಗಳ ಸಹಯೋಗವಿಲ್ಲ

'ಐ' ಬ್ರಾಂಡ್ ವಿಚಾರದಲ್ಲಿ ಬಿಎಂಡಬ್ಲ್ಯು ತನ್ನದೇ ಆದ ವಿಶೇಷ ಯೋಜನೆಯನ್ನು ಹೊಂದಿದ್ದು, ಹಾಗಾಗಿ ಸಹಭಾಗಿತ್ವದಲ್ಲಿ ತೊಡಗದಿರಲು ನಿರ್ಧರಿಸಿದೆ.

ಬಿಎಂಡಬ್ಲ್ಯು ಐ8 ತಯಾರಿಗೆ ಎಂ ಎಂಜಿನಿಯರ್‌ಗಳ ಸಹಯೋಗವಿಲ್ಲ

ಎರಡು ಬ್ರಾಂಡ್‌ಗಳು ಗರಿಷ್ಠ ನಿರ್ವಹಣೆಯನ್ನು ಹೊಂದಿದೆ. ಆದರೆ ಐ8ಗೆ ಹೋಲಿಸಿದರೆ 'ಎಂ' ವಿಭಾಗ ಹೆಚ್ಚು ವೇಗತೆಯನ್ನು ಪಡೆದಿದೆ. 'ಐ' ಕಾರುಗಳು 4.4 ಸೆಕೆಂಡುಗಳಲ್ಲಿ 100 ಕೀ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಬಿಎಂಡಬ್ಲ್ಯು ಐ8 ತಯಾರಿಗೆ ಎಂ ಎಂಜಿನಿಯರ್‌ಗಳ ಸಹಯೋಗವಿಲ್ಲ

ಬಿಎಂಡಬ್ಲ್ಯು 'ಐ' ಬ್ರಾಂಡ್ ಯಶಸ್ವಿ ಕಂಡರೆ ಅದು ಬಿಎಂಡಬ್ಲ್ಯು ಪಾಲಿಗೆ ಮಹತ್ತರ ಸಾಧನೆಯಾಗಿರಲಿದೆ. ಇದು ಭವಿಷ್ಯದ ಯೋಜನೆಯ ವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ ಬಲಪಡಿಸಲಿದೆ ಎಂದಿದೆ.

More from DriveSpark

Article Published On: Tuesday, September 17, 2013, 9:23 [IST]
English summary
BMW has answered a common question that is sure to have cropped up in many a minds, be it industry specialists or simply BMW fans. Executives from the Bavarian auto company have cleared the air by stating no ‘M' badged ‘i' car will be made.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+