ಗ್ರಾಹಕ ಸೇವೆ ತೃಪ್ತಿಯಲ್ಲಿ ಬಿಎಂಡಬ್ಲ್ಯು ಅಗ್ರ
ಐಷಾರಾಮಿ ಕಾರು ಬ್ರಾಂಡ್‌ಗಳ ಪೈಕಿ ಗ್ರಾಹಕ ಸೇವೆ ತೃಪ್ತಿಯಲ್ಲಿ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಅಗ್ರಸ್ಥಾನದಲ್ಲಿ ಹೊರಹೊಮ್ಮಿದೆ.
ಜೆ.ಡಿ ಪವರ್ ಏಷಿಯಾ ಫೆಸಿಫಿಕ್ 2013 ಬಿಡುಗಡೆಗೊಳಿಸಿರುವ ಕಸ್ಟಮರ್ ಸರ್ವೀಸ್ ಸ್ಯಾಟಿಸ್‌ಫಾಕ್ಷನ್ ಇಂಡೆಕ್ಷ್ (ಸಿಎಸ್‌ಐ) ಅಧ್ಯಯನದಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುವಲ್ಲಿ ಬಿಎಂಡಬ್ಲ್ಯು ಯಶಸ್ವಿಯಾಗಿದೆ.

2011 ಮೇದಿಂದ 2012 ಆಗಸ್ಟ್ ಅವಧಿಯಲ್ಲಿ ಐಷಾರಾಮಿ ಕಾರು ಖರೀದಿಸಿದ 238ರಷ್ಟು ಮಾಲಿಕರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. ಬಳಿಕ 2013 ಮೇ ತಿಂಗಳಿಂದ ಆಗಸ್ಟ್ ಅವಧಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿತ್ತು.
ಸರ್ವೀಸ್ ಗುಣಮಟ್ಟತೆ, ಕಾರಿನ ಪಿಕಪ್, ಸರ್ವೀಸ್ ಸಲಹೆ, ಸರ್ವೀಸ್ ಸೌಲಭ್ಯ ಮತ್ತು ಸರ್ವೀಸ್ ಉಪಕ್ರಮಗಳೆಂಬ ಐದು ಅಂಶಗಳ ಆಧಾರದಲ್ಲಿ ಮಾಹಿತಿ ಕಳೆಹಾಕಲಾಗಿತ್ತು. ಒಟ್ಟಾರೆಯಾಗಿ ಐಷಾರಾಮಿ ಗ್ರಾಹಕರು ತೃಪ್ತಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications