2014ರಲ್ಲಿ ಬಿಎಂಡಬ್ಲ್ಯು ಎಕ್ಸ್4 ಎಸ್‌ಎವಿ ನಿರೀಕ್ಷಿಸಿ

Written By:
ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ಕುಟುಂಬಕ್ಕೆ ನೂತನ ಸದಸ್ಯರ ಸೇರ್ಪಡೆಯಾಗಲಿದೆ. ಮೂಲಗಳ ಪ್ರಕಾರ ಬಿಎಂಡಬ್ಲ್ಯು ಎಕ್ಸ್4 ಎಸ್‌ಯುವಿ ಕಾರು 2014ನೇ ಸಾಲಿನಲ್ಲಿ ಆಗಮನವಾಗಲಿದೆ.

ಹಾಗಿದ್ದರೂ ಪ್ರಸ್ತುತ ಕಾರು ಎಸ್‌ಯುವಿ ಬದಲು ಎಸ್‌‍ಎವಿ ಅಂದರೆ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್ ಎಂದೆನಿಸಿಕೊಳ್ಳಲಿದೆ. ಈ ಬಗೆಗಿನ ಘೋಷಣೆಯನ್ನು ಬಿಎಂಡಬ್ಲ್ಯು ಪ್ರಕಟಿಸಿದೆ.

ಎಕ್ಸ್3 ಪ್ಲಾಟ್ ಫಾರ್ಮ್‌ನಡಿಯಲ್ಲಿ ಹೊಸ ಕಾರು ಸಿದ್ಧಗೊಳ್ಳಲಿದೆ. ಹಾಗೆಯೇ ಇದರ ದರ ಎಕ್ಸ್5 ಹಾಗೂ ಎಕ್ಸ್3 ದರಗಳ ನಡುವೆ ಇರಲಿದೆ. ಐಷಾರಾಮಿ ಇಂಟಿರಿಯರ್ ಭಾಗಗಳು ಹಾಗೂ ಇನ್ನಿತರ ಆಕರ್ಷಕ ವೈಶಿಷ್ಟ್ಯಗಳು ಬಿಎಂಡಬ್ಲ್ಯು ಎಕ್ಸ್4 ಸೆಕೆಂಡ್ ಜನರೇಷನ್ ಕಾರನ್ನು ಮತ್ತಷ್ಟು ಸುಂದರವಾಗಿಸಲಿದೆ.

2014 ಎಕ್ಸ್4 ಎಸ್‌ಎವಿ ಕಾರಿನಲ್ಲಿ ಎಕ್ಸ್3 ಆವೃತ್ತಿಯಲ್ಲಿ ಬಳಕೆಯಾದ ಸಮಾನ 4 ಹಾಗೂ 6 ಸಿಲಿಂಡರ್ ಬಳಕೆಯಾಗಲಿದೆ. ಹಾಗೆಯೇ ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

English summary
BMW will introduce a new member to its ‘X' SUV family in 2014. The BMW X4, however, is being called an SAV, standing for Sports Activity Vehicle. The announcement was made by Dr. Norbert Reithofer, chairman of the Board of Management of BMW AG during the annual press conference.
Story first published: Tuesday, March 26, 2013, 17:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark