ಶೀಘ್ರದಲ್ಲೇ ಬಿಎಂಡಬ್ಲ್ಯು ಝಡ್4 ಫೇಸ್‌ಲಿಫ್ಟ್ ವರ್ಷನ್ ಲಾಂಚ್

By Nagaraja

ವರ್ಷಾರಂಭದಲ್ಲಿ ನಡೆದ ಡೆಟ್ರಾಯ್ಟ್ ಮೋಟಾರ್ ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ 2014 ಬಿಎಂಡಬ್ಲ್ಯು ಝಡ್4 ಮಾದರಿ ಭಾರತಕ್ಕೆ ನವೆಂಬರ್ 14ರಂದು ಪ್ರವೇಶಿಸಲಿದೆ.

ತನ್ನ ಹಿಂದಿನ ಆವೃತ್ತಿಗಿಂತಲೂ ಬಿಎಂಡಬ್ಲ್ಯು ಝಡ್4 ಹೆಚ್ಚು ಆಕರ್ಷಕವೆನಿಸಲಿದೆ. ಇದು ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದ್ದು, ಎಲ್ಲ ಹೊಸತನದಿಂದ ಕೂಡಿರುವ ಕಲರ್ ವೆರಿಯಂಟ್‌ನಲ್ಲಿ ಆಗಮನವಾಗಲಿದೆ.


ವಿಶೇಷವಾಗಿಯೂ ಇದರ ಕಿತ್ತಳೆ ಬಣ್ಣ ಕಾರು ಪ್ರಿಯರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಮುಂಭಾಗದಲ್ಲಿ ಹೊಸತಾದ ಬಂಪರ್, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಸೈಡ್ ಇಂಡಿಕೇಟರುಗಳು ಕಾರಿನ ಹೊರಮೈಯಲ್ಲಿ ಕಾಣಿಸಿಕೊಂಡಿರುವ ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಇನ್ನು ಒಳಭಾಗದಲ್ಲಿ ಒರೆಂಜ್ ಟಚ್ ನೀಡಲಾಗಿದ್ದು, ವುಡ್ ಫಿನಿಶ್ ಡ್ಯಾಶ್‌ಬೋರ್ಡ್, ಪರಿಷ್ಕೃತ ಎಲೆಕ್ಟ್ರಾನಿಕ್ಸ್ ಹೆಚ್ಚು ಆಕರ್ಷಕಣೆಗೆ ಕಾರಣವಾಗಿದೆ.

ಒಟ್ಟಿನಲ್ಲಿ ಬಿಎಂಡಬ್ಲ್ಯು ಝಡ್4 3.0 ಲೀಟರ್ ಟ್ವಿನ್ ಟರ್ಬೊ , ಸಿಕ್ಸ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 306 ಪಿಎಸ್ ಪವರ್ (400 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 7 ಸ್ಪಿಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರಲಿದೆ.

bmw z4

Article Published On: Monday, November 11, 2013, 12:34 [IST]
English summary
The 2014 model year BMW Z4 was launched early this year at the Detroit Motor Show. That BMW Z4 facelift will make its appearance in India on November 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+