ಹ್ಯುಂಡೈ ಐ20 ಖರೀದಿಸಿ; ಸಿಂಗಾಪುರದಲ್ಲಿ ರಜಾ ಮಜಾ!
ಪ್ರಸಕ್ತ ಉಂಟಾಗಿರುವ ಆರ್ಥಿಕ ಹಿಂಜರಿತದ ಪರಿಸ್ಥಿತಿಯು ಭಾರತೀಯ ವಾಹನ ಮಾರುಕಟ್ಟೆ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಿದೆ. ಇದು ಕಾರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಈ ಎಲ್ಲ ಪರಿಸ್ಥಿತಿಗಳಿಂದ ಹೊರಬರುವ ನಿಟ್ಟಿನಲ್ಲಿ ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆಗಳು ಆಕರ್ಷಕ ಆಫರುಗಳನ್ನು ಮುಂದಿಡುತ್ತಿದ್ದು, ಮಾರುಕಟ್ಟೆಯಲ್ಲಿ ಸ್ಥಿರ ಮಾರಾಟ ಕಾಯ್ದುಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.
ಪ್ರಸ್ತುತ ಜನಪ್ರಿಯ ಆವೃತ್ತಿಗಳಿಗೆ ಜಾಸ್ತಿ ಡಿಸ್ಕೌಂಡ್ ನೀಡುವುದು ಟ್ರೆಂಡ್ ಆಗಿಬಿಟ್ಟಿದೆ. ಇದರ ಪರಿಣಾಮವೆಂಬಂತೆ ಜನಪ್ರಿಯ ಆವೃತ್ತಿಗಳ ಲಿಮಿಟೆಡ್ ಹಾಗೂ ವಿಶೇಷ ಆವೃತ್ತಿಯು ಮಾರುಕಟ್ಟೆಗೆ ಆಗಮಿಸುತ್ತಿರುವ ಪ್ರಕಿಯೆ ಕಾಣಸಿಗುತ್ತಿವೆ.
ಈ ಬಾರಿ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ, ದೇಶದಲ್ಲಿ ತನ್ನ ಜನಪ್ರಿಯ ಐ10 ಹಾಗೂ ಐ20 ಆವೃತ್ತಿಗಳಿಗೆ ವಿಶೇಷ ಆಫರುಗಳನ್ನು ಮುಂದಿಟ್ಟಿದೆ.
ಹ್ಯುಂಡೈ ಐ10 ಇರಾ ಹ್ಯಾಚ್‌ಬ್ಯಾಕ್ ಕಾರಿಗೆ 10,000 ರು.ಗಳ ವರೆಗೆ ಆಫರ್ ಮುಂದಿಡಲಾಗಿದೆ. ಇನ್ನು ಹ್ಯುಂಡೈ ಐ20 ಖರೀದಿ ವೇಳೆ ನಿಮ್ಮ ರಜಾದಿನಗಳನ್ನು ಸಿಂಗಾಪುರದಲ್ಲಿ ಕಳೆಯುವ ಅಪೂರ್ವ ಅವಕಾಶವಿದೆ. ಇದರ ಜತೆಗೆ ಹೆಚ್ಚುವರಿ 30,000 ರು.ಗಳ ವರೆಗೆ ಡಿಸ್ಕೌಂಟ್ ಲಭ್ಯವಿರುತ್ತದೆ. ಪ್ರಸ್ತುತ ಆಫರ್ ಜುಲೈ 31ರ ವರೆಗೆ ಮಾತ್ರ ಜಾರಿಯಲ್ಲಿರಲಿದೆ.
ಹಾಗೊಂದು ವೇಳೆ ನೀವು ಹ್ಯುಂಡೈ ಕಾರು ಖರೀದಿಸಲು ಯೋಜನೆ ಹಾಕಿಕೊಂಡಿದ್ದಲ್ಲಿ ಇದುವೇ ಸರಿಯಾದ ಸಮಯ. ತುಂಬಾ ಸಮಯ ಯೋಚನಾ ಮಗ್ನರಾಗದೆ ಈಗಾಗಲೇ ನಿಮ್ಮ ಹತ್ತಿರದ ಹ್ಯುಂಡೈ ಡೀಲರುಗಳ ಬಳಿ ತೆರಳಿ ಆಫರುಗಳ ಬಗ್ಗೆ ವಿಚಾರಿಸಿ.


Click it and Unblock the Notifications









