ಸತತ 7ನೇ ತಿಂಗಳಲ್ಲೂ ಕಾರು ಮಾರುಕಟ್ಟೆ ಕುಸಿತ
ಕಳೆದ ವರ್ಷ ಇದೇ ಅವಧಿಯಲ್ಲಿ ದೇಶದ ಕಾರು ಮಾರುಕಟ್ಟೆಯು 1,63,222 ಯುನಿಟ್‌ಗಳ ಮಾರಾಟವನ್ನು ಕಂಡಿತ್ತು. ಆದರೆ ಈ ಬಾರಿಯದು 1,43,216 ಯುನಿಟ್‌ಗಳಿಗೆ ಕುಸಿದಿರುವುದಾಗಿ ಸಿಯಾಮ್ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಯಾಮ್ ಮಹಾ ನಿರ್ದೇಶಕ ವಿಷ್ಣು ಮಾಥುರ್, ದೀರ್ಘ ಅವಧಿಯ ವರೆಗೆ ಸತತ ಕುಸಿತ ಮುಂದುವರಿದಿದೆ. ಈ 2008-09ರಲ್ಲೂ ಹಿನ್ನಡೆ ಸಂಭವಿಸಿದಾಗಲೂ ಇಷ್ಟೊಂದು ಕೆಟ್ಟದಾದ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದಿದ್ದಾರೆ. ಆರ್ಥಿಕ ಕುಸಿತ, ಬೆಲೆಯೇರಿಕೆ ಹಾಗೂ ಬಡ್ಡಿದರ ಏರಿಕೆ ಎಲ್ಲವೂ ಕಾರುಗಳ ಬೇಡಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.
ಈ ಅವಧಿಯಲ್ಲಿ ಆಟೋ ದಿಗ್ಗಜ ಮಾರುತಿ ಸುಜುಕಿ ಶೇಕಡಾ 8.25, ಹ್ಯುಂಡೈ ಶೇಕಡಾ 0.35 ಹಾಗೂ ಟಾಟಾ ಮೋಟಾರ್ಸ್ ಶೇಕಡಾ 48.60ರಷ್ಟು ಇಳಿಕೆ ಅನುಭವಿಸಿದೆ. ಹಾಗಿದ್ದರೂ ಅಮೇಜ್ ನೆರವಿನೊಂದಿಗೆ ಹೋಂಡಾ ಇಂಡಿಯಾ ಶೇಕಡಾ 9.31ರಷ್ಟು ಏರಿಕೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ದ್ವಿಚಕ್ರ ವಾಹನ ಸೆಗ್ಮೆಂಟ್ ಕೂಡಾ ಮೇ ತಿಂಗಳಲ್ಲಿ ಅಲ್ಪ (ಶೇ. 0.72) ಹಿನ್ನಡೆ ಅನುಭವಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8,87,646 ಯುನಿಟ್ ಮಾರಾಟವಾಗಿದ್ದರೆ ಈ ಬಾರಿಯದು 8,81288 ಯುನಿಟ್‌ಗಳಿಗೆ ಇಳಿಕೆ ಕಂಡಿದೆ. ಈ ಪೈಕಿ ಹೀರೊ ಶೇಕಡಾ 2.11 ಹಾಗೂ ಹೋಂಡಾ ಶೇ, 2.79ರಷ್ಟು ಹಿಂಬಡ್ತಿ ಅನುಭವಿಸಿದ್ದರೆ ಬಜಾಜ್ ಶೇಕಡಾ 2.6ರಷ್ಟು ಏರಿಕೆ ದಾಖಲಿಸಿದೆ.


Click it and Unblock the Notifications









