ಕಾರು ವಿಮೆ ಅಗ್ಗವಾಗಿಸಲು ಈ ಕೂಡಲೇ ಮದ್ವೆಯಾಗಿ!
ಸಾಧಾರಣವಾಗಿ ಕಾರು ಪ್ರೀಮಿಯಂಗಳು ಎಂಜಿನ್ ಸಾಮರ್ಥ್ಯ ಹಾಗೂ ಭೌಗೋಳಿಕ ವಲಯಗಳಂತಹ ಮೂಲಭೂತ ಮಾನದಂಡಗಳನ್ನು ಒಳಗೊಂಡಿರುತ್ತದೆ. ಆದರೆ ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಇನ್ನಿತರ ಹೆಚ್ಚುವರಿ ಅಂಶಗಳನ್ನು ಪರಿಗಣಿಸಲು ಆರಂಭಿಸಲಾಯಿತು. ಇದರಲ್ಲಿ ಕಾರಿನಲ್ಲಿ ಬಳಸುವ ಇಂಧನ, ಕಳ್ಳತನ ವಿರೋಧಿ ಸಲಕರಣೆಗಳ ಪ್ರಭಾವ ಮೊದಲಾದವುಗಳನ್ನು ಬಳಸಲಾಯಿತು. ಇನ್ನು ಕೆಲವು ವಿಮಾದಾರರು ಜನಸಂಖ್ಯಾ ನಿಯತಾಂಕಗಳನ್ನು ಅಂದರೆ ವಿಮಾದಾರನ ಉದ್ಯೋಗ, ಪ್ರಾಯ ಮೊದಲಾದ ಅಂಶವನ್ನು ಪರಿಗಣಿಸುತ್ತಿದೆ.
ವಿವಾಹಿತರಾದವರು ಕಾರನ್ನು ಹೆಚ್ಚು ಸುರಕ್ಷಿತವಾಗಿ ಚಾಲನೆ ಮಾಡುತ್ತಿದ್ದಾರೆ ಎಂಬುದು ವಿಮಾದಾರರ ನಂಬಿಕೆಯಾಗಿದೆ. ಬಜಾಜ್ ಅಲಯನ್ಸ್, ಐಸಿಐಸಿಐ ಖಾಸಗಿ ವಿಮಾ ಕಂಪನಿಗಳು ಈ ಎಲ್ಲ ಹೊಸ ಮಾನದಂಡಗಳನ್ನು ಪರಿಗಣಿಸುತ್ತಿದ್ದು, ಹೊಸ ಗ್ರಾಹಕರ ಪ್ರೊಫೈಲ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಪ್ರೀಮಿಯಂಗಳಗೆ ಶೇಕಡಾ 5-10ರಷ್ಟು ವಿಮೆ ಕಡಿತಗೊಳಿಸಲಾಗುತ್ತಿದೆ.
ಹಾಗಿದ್ದರೆ ಇನ್ಯಾಕೆ ತಡ ನೀವು ಅವಿವಾಹಿತರಾಗಿದ್ದರೆ ಈ ಕೂಡಲೇ ಮದುವೆಯಾಗಿ ನಿಮ್ಮ ಕಾರು ವಿಮೆಯನ್ನು ಅಗ್ಗವಾಗಿಸಿ


Click it and Unblock the Notifications









