4 ಚಕ್ರಗಳ ಆಟೋ ರಿಕ್ಷಾ ಆವಿಷ್ಕಾರಕ್ಕೆ ಸರಕಾರ ಚಿಂತನೆ
ದೆಹಲಿ ಸಾರಿಗೆ ಸಚಿವಾಲಯವು ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದು, ಹೆಚ್ಚು ಸುರಕ್ಷಿತ ಪಯಣ ದೃಷ್ಟಿಯಲ್ಲಿಟ್ಟುಕೊಂಡು ತ್ರಿಚಕ್ರ ಬದಲು ನಾಲ್ಕು ಚಕ್ರಗಳ ಆಟೋ ರಿಕ್ಷಾಗಳಿಗೆ ಮನ್ನಣೆ ನೀಡುವ ಚಿಂತನೆಯಲ್ಲಿದೆ. ಈ ಸಂಬಂಧ ಟಾಟಾ ಮೋಟಾರ್ಸ್‌ನಿಂದ ಪ್ರಸ್ತಾವನೆ ಕೂಡಾ ಬಂದಿದೆ ಎನ್ನಲಾಗಿದೆ. ಪ್ರಸ್ತುತ ಯೋಜನೆ ಪ್ರಾರಂಭಿಕ ಘಟ್ಟದಲ್ಲಿದ್ದು, ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಲಭಿಸಲಿದೆ.
ತ್ರಿಚಕ್ರ ವಾಹನ ಸವಾರರು ದುಡುಕಿನಿಂದ ವಾಹನ ಚಲಾಯಿಸುತ್ತಾರೆ. ಇದು ಅನೇಕ ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ಇವೆಲ್ಲವನ್ನು ನಿಯಂತ್ರಿಸಲು ಹೆಚ್ಚು ಸುರಕ್ಷಿತವಾದ ಹಾಗೂ ರಸ್ತೆಗಳಲ್ಲಿ ಸ್ಥಿರತೆಯ ಪ್ರಯಾಣವನ್ನು ಖಾತ್ರಿಪಡಿಸಲು ಸರಕಾರ ಮುಂದಾಗಿದೆ.
ಇವೆಲ್ಲದರ ಮೂಲಕ ಒಂದು ಪ್ರದೇಶಕ್ಕೆ ತೆರಳಲು ನಿರಾಕರಿಸುವ ಆಟೋ ಹಾಗೂ ಮೀಟರ್ ಬಳಕೆ ಮಾಡದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಕಟು ಬದ್ದವಾಗಿದೆ.
ಸರಕಾರವು ಈಗಾಗಲೇ ನಾಲ್ಕು ಚಕ್ರಗಳ ವಾಹನಗಳಿಗೆ ರಸ್ತೆಯಲ್ಲಿ ಚಲಿಸಲು ಹಸಿರು ನಿಶಾನೆ ತೋರಿರುವ ಹಿನ್ನಲೆಯಲ್ಲಿ ಹೊಸ ಯೋಜನೆ ಸದ್ಯದಲ್ಲೇ ನನಸಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿದೆ. ಇದು ಇನ್ನಷ್ಟೇ ಬಿಡುಗಡೆಗೊಳ್ಳಬೇಕಾಗಿರುವ ಬಜಾಜ್ ಆರ್‌ಇ63 ವಾಹನಕ್ಕೆ ಹೆಚ್ಚಿನ ನೆರವು ಮಾಡುವ ಸಾಧ್ಯತೆಯಿದೆ.


Click it and Unblock the Notifications









