ಜಾಗತಿಕ ಮಟ್ಟದಲ್ಲಿ ಮುಂದುವರಿದ ಹೀರೊ ಪ್ರಾಬಲ್ಯ
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಜಾಗತಿಕ ಮಟ್ಟದಲ್ಲಿ ಮಾರಾಟ ಕುದುರಿಸಿಕೊಳ್ಳುವ ತನ್ನ ಆಕ್ರಮಣಕಾರಿ ಯೋಜನೆಗಳನ್ನು ಮುಂದುವರಿಸಿದೆ. ಇದರ ಅಂಗವಾಗಿ ಪೆರು ದೇಶದಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸಿದೆ. ಹೀರೊ ಮೊಟೊಕಾರ್ಪ್ ಈಗಾಗಲೇ ಲ್ಯಾಟಿನ್ ಅಮೆರಿಕದಲ್ಲಿ ತನ್ನ ಬ್ರಾಂಡ್ ಕುದುರಿಸಿಕೊಂಡಿದೆ.
ಹೀರೊ ಮೊಟೊಕಾರ್ಪ್ ಎಸ್‌ಎಸಿ ಮುಖಾಂತರ ಪೆರು ದೇಶದಲ್ಲಿ ಮಾರಾಟ ಹಮ್ಮಿಕೊಳ್ಳಲಿದೆ. ಇನ್ನು ಮುಂದೆ ಆಫ್ರಿಕಾ ಖಂಡದ ಈ ದೇಶದಲ್ಲಿ ಪ್ಯಾಶನ್ ಪ್ರೊ, ಗ್ಲಾಮರ್, ಹಂಕ್, ಥ್ರಿಲ್ಲರ್, ಕರಿಜ್ಮಾ ಝಡ್‌ಎಂಆರ್, ಕರಿಷ್ಮಾ ಆರ್ ಜತೆಗೆ ಸ್ಕೂಟರ್ ಪ್ಲೆಶರ್ ಮಾರಾಟಕ್ಕೆ ಲಭ್ಯವಾಗಲಿದೆ. ಇದು ದೇಶದಲ್ಲಿ ಸ್ಥಿತಗೊಂಡಿರುವ 85 ಔಟ್ಲೆಟ್ ಮುಖಾಂತರ ವಿತರಣೆಯಾಗಲಿದೆ.
ದಕ್ಷಿಣ ಅಮೆರಿಕಾದ ಕೊಲಂಬಿಯಾ, ಗ್ವಾಂಟಿಮಾಲಾ, ಹೋಂಡುರಾಸ್ ಹಾಗೂ ಇಎಲ್ ಸಾಲ್ವಾಡೋರ್ ಪ್ರಾಂತ್ಯಗಳಲ್ಲೂ ಹೀರೊ ಮಾಡೆಲ್‌ಗಳು ಮಾರಾಟವಾಗುತ್ತಿವೆ. 2020ರ ವೇಳೆಯಾಗುವಾಗ 100 ಮಿಲಿಯನ್ ಉತ್ಪಾದಕಾ ವರ್ಷನ್ ಕಂಡುಕೊಳ್ಳುವುದು ಹೀರೊ ಗುರಿಯಾಗಿದೆ. ಹಾಗೆಯೇ 50 ದೇಶಗಳಲ್ಲಿ ಮಾರಾಟ ಕಂಡುಕೊಳ್ಳುವ ಗುರಿಯಿರಿಸಿಕೊಂಡಿರುವ ಹೀರೊ 60,000 ಕೋಟಿ ರು.ಗಳಷ್ಟು ದೊಡ್ಡ ಪ್ರಯಾಣ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.


Click it and Unblock the Notifications









