ಹೋಂಡಾ ಸಿಆರ್-ವಿ ದೇಶದಲ್ಲಿ ಲಾಂಚ್; ದರ?

ಜಪಾನ್ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ ಇಂಡಿಯಾ, ದೇಶದಲ್ಲಿ 2013 ಸಿಆರ್-ವಿ ಕಾರನ್ನು ಲಾಂಚ್ ಮಾಡಿದೆ. ಇದರ ಪ್ರಾರಂಭಿಕ ದರ 19.95 ಲಕ್ಷ ರು.ಗಳಾಗಿವೆ.

ಹೋಂಡಾದ ಪ್ರೀಮಿಯಂ ಫೀಚರ್‌ಗಳು ಮಿಟ್ಸುಬಿಸಿ ಔಟ್‌ಲ್ಯಾಂಡರ್ ಹಾಗೂ ಷೆವರ್ಲೆ ಕಾಪ್ಟಿಯಾ ಆವೃತ್ತಿಗಳಿಗೆ ಕಠಿಣ ಪೈಪೋಟಿ ನೀಡುವಲ್ಲಿ ನೆರವಾಗಲಿದೆ. ಇದೇ ಮೊದಲ ಬಾರಿಗೆ ದೇಶದಲ್ಲೇ ಹೋಂಡಾ ಸಿಆರ್-ವಿ ಜೋಡಣೆ ಮಾಡಲಾಗಿದೆ.

ಹೊಂಡಾ ದರ ಮಾಹಿತಿ:

  • 2013 Honda CR-V 2.0L MT - Rs 19.95 lakh
  • 2013 Honda CR-V 2.0L AT - Rs 20.85 lakh
  • 2013 Honda CR-V 2.4L AT - Rs 22.40 lakh
  • 2013 Honda CR-V 2.4L AT with AVN - Rs 23.85 lakh

ನಿಮ್ಮ ಮಾಹಿತಿಗಾಗಿ, ಹೋಂಡಾ ಸಿಆರ್-ವಿ ಎರಡು ಪೆಟ್ರೋಲ್ ಎಂಜಿನ್ ಹಾಗೂ ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಎಂಟ್ರಿ ಲೆವೆಲ್ 2 ಲೀಟರ್ ಎಂಟಿ ವೆರಿಯಂಟ್‌ಗೆ 19.95 ಲಕ್ಷ ರು. ಹಾಗೂ 2.4 ಟಾಪ್ ವೆರಿಯಂಟ್ ಎಂಟಿ ಜತೆ ಎವಿಎನ್ (ಆಡಿಯೋ, ವಿಡಿಯೋ, ನೇವಿಗೇಷನ್) ಆವೃತ್ತಿಯೆ ದೆಹಲಿ ಎಕ್ಸ್ ಶೋ ರೂಂ ದರ 23.85 ಲಕ್ಷ ರು.ಗಳಾಗಿವೆ.

ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದರೆ 2 ಲೀಟರ್ ಪೆಟ್ರೋಲ್ ಎಂಜಿನ್ 156 ಪಿಎಸ್ ಪವರ್ (190ಎನ್‌ಎಂ) ಉತ್ಪಾದಿಸಲಿದೆ. ಹಾಗೆಯೇ ಪ್ರತಿ ಲೀಟರ್‌ಗೆ 13.7 ಕೀ.ಮೀ ಮೈಲೇಜ್ ಸಿಗಲಿದೆ. ಅಂತೆಯೇ 2.4 ಲೀಟರ್ ಪೆಟ್ರೋಲ್ ಯುನಿಟ್ 190 ಪಿಎಸ್ ಪವರ್ (226 ಎನ್‌ಎಂ) ಉತ್ಪಾದಿಸಲಿದೆ. ಇದು ಪ್ರತಿ ಲೀಟರ್‌ಗೆ 12 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಈ ಎರಡು ಎಂಜಿನ್‌ಗಳು ಪ್ಯಾಡಲ್ ಶಿಫ್ಟರ್ ಜತೆ 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗಿದ್ದರೂ 2 ಲೀಟರ್ ಎಂಟಿ ಯುನಿಟ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮಾತ್ರ ಹೊಂದಿರಲಿದೆ.

2.4 ಲೀಟರ್ ಪೆಟ್ರೋಲ್ ವೆರಿಯಂಟ್ 4WD (ಫೋರ್ ವೀಲ್ ಡ್ರೈವ್) ಸಿಸ್ಟಂ ಹಾಗೆಯೇ 2.0 ವೆರಿಯಂಟ್ FWD (ಫ್ರಂಟ್ ವೀಲ್ ಡ್ರೈವ್) ಸಿಸ್ಟಂ ಹೊಂದಿರಲಿದೆ. ಎಲ್ಲ ಆಟೋಮ್ಯಾಟಿಕ್ ವೆರಿಯಂಟ್‌ಗಳಲ್ಲಿ ಪ್ಯಾಡಲ್ ಶಿಫ್ಟರ್ ಲಭ್ಯವಿರಲಿದೆ.

ನಾಲ್ಕನೇ ತಲೆಮಾರಿನ ಸಿಆರ್-ವಿ ಕಾರಿನಲ್ಲಿ ಕಡಿಮೆ ಘರ್ಷಣೆಯ ಬೀರಿಂಗ್ ಹಾಗೂ ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಆಳವಡಿಸಲಾಗಿದೆ. ಇದರಿಂದ ಉತ್ತಮ ಇಂಧನ ದಕ್ಷತೆ ಲಭಿಸಲಿದೆ. ಇನ್ನು ಕಾರಿನ ವೈಶಿಷ್ಟ್ಯಗಳ ಬಗ್ಗೆ ಕಣ್ಣಾಯಿಸಿದಾಗ ಸಿಡಿ ಜತೆ ಆರು ಸ್ಪೀಕರ್ ಆಡಿಯೋ, ಯುಎಸ್‌ಬಿ ಹಾಗೂ ಐಪಾಡ್ ಕನೆಕ್ಟಿವಿಟಿ ಇರಲಿದೆ. ಇನ್ನು ಟಾಪ್ ಎಂಡ್ ವೆರಿಯಂಟ್‌ನಲ್ಲಿ 6.1 ಟಚ್‌ಸ್ಕ್ರೀನ್ ಸಿಸ್ಟಂ ಹಾಗೂ ಸ್ಯಾಟ್‌ಲೈಟ್ ನೇವಿಗೇಷನ್ ಕೂಡಾ ಇರಲಿದೆ.

ಇಷ್ಟೇ ಅಲ್ಲದೆ ಎಲೆಕ್ಟ್ರಿಕ್ ಸನ್ ರೂಫ್, ಕ್ರೂಸ್ ಕಂಟ್ರೋಲ್, ಡ್ರೈವರ್ ಸೀಟ್ ಹೊಂದಾಣಿಕೆ, ಸ್ಟೀರಿಂಗ್ ಹೊಂದಾಣಿಕೆ ಹಾಗೂ ಡ್ಯುಯಲ್ ಟೋನ್ ಎಸಿ ಸೌಲಭ್ಯವಿದೆ. ಇನ್ನು ಸುರಕ್ಷತೆ ಬಗ್ಗೆ ಮಾತನಾಡಿದರೆ ರಿಯರ್ ವ್ಯೂ ಕ್ಯಾಮೆರಾ, ಎಬಿಎಸ್ ಜತೆ ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಪಾರ್ಕಿಂಗ್ ಬ್ರೇಕ್ ಹಾಗೂ ಸಿಕ್ಸ್ ಡ್ಯುಯಲ್ ಎಸ್‌ಆರ್‌ಎಸ್ ಏರ್‌ಬ್ಯಾಗ್ ಹೊಂದಿರಲಿದೆ.

ಕಾಸ್ಮೆಟಿಕ್ ಆಯ್ಕೆಯನ್ನು ಇನ್ನಷ್ಟು ಆಕರ್ಷಿಸಲು ಎರಡು ಆಕ್ಸೆಸರಿ ಪ್ಯಾಕೇಜ್ ಕೂಡಾ ನೀಡಲಾಗಿದೆ. ಇದರಲ್ಲಿ ಪ್ರಭಾತ್ಮಕ ಸ್ಟೈಲ್ ಪ್ಯಾಕೇಜ್ ಹಾಗೂ ಎಲೆಗನ್ಸ್ ಸ್ಟೈಲ್ ಪ್ಯಾಕೇಜ್ ಸೇರ್ಪಡೆಯಾಗಿದೆ. ಹಾಗೆಯೇ ಒಟ್ಟಾರೆ ಐದು ಎಕ್ಸ್‌ಟೀರಿಯರ್ ಕಲರ್ ವೆರಿಯಂಟ್‌ಗಳು ಲಭ್ಯವಾಗಲಿದೆ. ಇದು Carnelian Red Pearl, Sparking Brown Metallic, Urban Titanium Metallic, Taffeta White ಹಾಗೂ Alabaster Silver Metallic ಆಗಿದೆ.

More from DriveSpark

Article Published On: Tuesday, February 12, 2013, 15:15 [IST]
English summary
Honda India has rolled out its all-new crossover, the 2013 CR-V in India with a starting price of Rs 19.95 lakh. The premium offering is out in the market to take on the likes of Mitsubishi Outlander and Chevrolet Captiva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+