ಉತ್ತರಾಖಂಡ್ ಸಂತ್ರಸ್ತರಿಗೆ ಹೋಂಡಾ 3 ಕೋಟಿ ನೆರವು
ಇದಕ್ಕೆ ನೂತನ ಸೇರ್ಪಡೆಯೆಂಬಂತೆ ಹೋಂಡಾ ಮೋಟಾರ್ಸ್ ಇಂಡಿಯಾ, ಮೂರು ಕೋಟಿ ರು.ಗಳ ನೆರವನ್ನು ಘೋಷಿಸಿದೆ. ಈ ಮೊತ್ತವನ್ನು ಸಂತ್ರಸ್ತ ಜನರ ಪುನರ್ವಸತಿ, ರಸ್ತೆ ಸೇರಿದಂತೆ ಮೂಲಸೌಕರ್ಯ ಪುನಃಸ್ಥಾಪಿಸಲು ಬಳಸಿಕೊಳ್ಳಲಾಗುವುದು.
ಉತ್ತರಾಖಂಡ್ ಸಿಎಂ ವಿಜಯ್ ಬಹುಗುಣ ಅವರಿಗೆ ಸಂತ್ರಸ್ತ ನಿಧಿಯನ್ನು ಹಸ್ತಾಂತರಿಸಲಾಗಿದೆ. ಹೋಂಡಾ ಗ್ರೂಪ್ ಕಂಪನೀಸ್ ಈ ಮೊತ್ತವನ್ನು ಕಲೆ ಹಾಕಿದ್ದು, ಇದರಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್, ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹೋಂಡಾ ಎಸ್‌ಐಇಎಲ್ ಪವರ್ ಪ್ರೊಡಕ್ಟ್ಸ್ ಲಿಮಿಟೆಡ್, ಹೋಂಡಾ ಆರ್ ಆಂಡ್ ಡಿ (ಇಂಡಿಯಾ) ಪ್ರೈವೇಟ್ ಹಾಗೂ ಹೋಂಡಾ ಮೋಟಾರ್ ಇಂಡಿಯಾ ಪ್ರೈವೇಟ್ ಇಂಡಿಯಾ ಜತೆಗೆ ಹೋಂಡಾ ನೌಕರರು ಹಾಗೂ ಡೀಲರುಗಳು ಸೇರಿದ್ದಾರೆ.
ಇದಕ್ಕೂ ಮೊದಲು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ 1.56 ಕೋಟಿ ರು. ಧನ ಸಹಾಯ ಮಾಡಿತ್ತು. ಅಲ್ಲದೆ ಮಹೀಂದ್ರ ಸಂಸ್ಥೆಯು ಉತ್ತರಾಖಂಡ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರು. ನೀಡಿತ್ತು. ಹಾಗೆಯೇ ಟಾಟಾ ಸಂಸ್ಥೆಯ ನೌಕರರು ಒಂದು ದಿನದ ಭತ್ಯೆಯನ್ನು ಉತ್ತರಾಖಂಡ್ ಸಂತ್ರಸ್ತರಿಗಾಗಿ ಮೀಸಲಿರಿಸಿದ್ದರು.


Click it and Unblock the Notifications
