ಇನ್ನು ಮುಂದೆ ಅಮೇಜ್ ಖರೀದಿಸಿದರೆ ಕೈ ಸುಡುತ್ತೆ!

ನೀವು ಹೋಂಡಾ ಅಮೇಜ್ ಕೊಂಡುಕೊಳ್ಳಲು ಯೋಜನೆ ಹಾಕಿಕೊಂಡಿದ್ದೇ ಆದ್ಧಲ್ಲಿ ಇನ್ನು ಮುಂದೆ ಕೈ ಸ್ವಲ್ಪ ಸುಟ್ಟುಕೊಳ್ಳಬೇಕಾಗುತ್ತದೆ. ಈಗಾಗಲೇ ಹೋಂಡಾ ಅಮೇಜ್ ಬುಕ್ಕಿಂಗ್ ಮಾಡಿಕೊಂಡವರು ಮೂರು ತಿಂಗಳುಗಳಷ್ಟು ಕಾಲ ಕಾರಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ದಾಖಲಿಸಿರುವ ಹೋಂಡಾ ಕಂಪನಿಯು ಅಮೇಜ್ ದರವನ್ನು ಏರಿಕೆಗೊಳಿಸಲು ನಿರ್ಧರಿಸಿದೆ.

ಹೋಂಡಾ ಅಮೇಜ್ ಕಾಂಪಾಕ್ಟ್ ಸಲೂನ್ ಕಾರಿನ ದರವನ್ನು 3,000ದಿಂದ 8,000 ರು.ಗಳ ವರೆಗೆ ಏರಿಸಲು ಕಂಪನಿ ನಿರ್ಧರಿಸಿದೆ. ದರ ವ್ಯತ್ಯಾಸವು ವಿವಿಧ ವೆರಿಯಂಟ್‌ಗಳನ್ನು ಅವಲಂಬಿಸಿರಲಿದೆ.

ಈ ನಡುವೆ ಹೋಂಡಾ ಸಿಆರ್‌ವಿ ದರಗಳನ್ನು ಸಹ 6,000ದಿಂದ 14,000 ರು.ಗಳ ವರೆಗೆ ಏರಿಸಲಾಗಿದೆ. ಪರಿಷ್ಕೃತ ದರವು ಜೂನ್ 1ರಿಂದಲೇ ಅನ್ವಯವಾಗುತ್ತದೆ.

ಲಾಂಚ್ ಆದ ದಿನದಿಂದ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿರುವ ಹೋಂಡಾ ಅಮೇಜ್ ಪ್ರಮುಖವಾಗಿಯೂ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತು ಸುಜುಕಿಯ ಸ್ವಿಫ್ಟ್ ಡಿಜೈರ್‌ಗೆ ಪೈಪೋಟಿ ನೀಡುತ್ತಿದೆ.

More from DriveSpark

Article Published On: Thursday, June 6, 2013, 12:05 [IST]
English summary
Honda has increased the prices of the recently launched Amaze. Honda’s new compact saloon sees its price hiked by Rs 3,000 to Rs 8,000, depending on the variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+