ಬೆಂಗ್ಳೂರಿಗೆ ಬರುತ್ತಾ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್
ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಹಾಂಕಾಂಗ್, ನೂತನ ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದೆ. ಭಾರತಕ್ಕೆ ಅದರಲ್ಲೂ ಪ್ರಮುಖವಾಗಿಯೂ ಉದ್ಯಾನಗರಿ ಬೆಂಗಳೂರಿಗೆ ಇಂತಹ ಬಸ್ಸುಗಳ ಪ್ರವೇಶ ಯಾವಾಗ ಆಗಲಿದೆ ಎಂಬುದು ಪ್ರಶ್ನೆಯ ವಿಷಯವಾಗಿದೆ.
ಅಂದ ಹಾಗೆ ಇದು ಹಾಂಕಾಂಗ್‌ನ ಪ್ರಪ್ರಥಮ ಎಲೆಕ್ಟ್ರಿಕ್ ಬಸ್ಸಾಗಿದ್ದು, 'ಇ-ಕೋಚ್' ಎಂಬ ಹೆಸರಿನಿಂದ ಅರಿಯಲ್ಪಡುತ್ತದೆ. ಪ್ರಮುಖವಾಗಿಯೂ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಆಳವಡಿಸುವ ಭಾಗವಾಗಿ ನೂತನ ಗ್ರೀನ್ ಬಸ್ ತಯಾರಿಸಲಾಗಿದೆ.
ಸಂಪೂರ್ಣವಾಗಿಯೂ ವಿದ್ಯುತ್ ಚಾಲಿತ ಬಸ್ ಆಗಿರುವ ಇ-ಕೋಚ್ ಜೀರೋ ಎಮಿಷನ್ ಹೊರಸೂಸುತ್ತದೆ. ಇದರೊಂದಿಗೆ ಸಾಂಪ್ರದಾಯಿಕ ಡೀಸೆಲ್ ಬಸ್ಸುಗಳಿಗೆ ಹೋಲಿಸಿದಾಗ ಮಾಲಿನ್ಯದ ಪ್ರಮಾಣ ಸಂಪೂರ್ಣ ಜೀರೋ ಆಗಿದೆ. ಹಾಗಿದ್ದರೆ ಬನ್ನಿ ಇ ಕೋಚ್ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣವೇ...

ಇ-ಕೋಚ್
49 ಜನರಿಗೆ ಪಯಣಿಸಬಹುದಾದ ಈ ಬಸ್ ಶಬ್ದ ಮಾಲಿನ್ಯ ಸೇರಿದಂತೆ ವಿಪರೀತ ಉಷ್ಣವನ್ನು ಕಾಪಾಡುತ್ತದೆ. ಇದರಲ್ಲಿ ಯಾವುದೇ ತರಹದ ಡೀಸೆಲ್ ಎಂಜಿನ್ ಬಳಕೆಯಾಗಿಲ್ಲ. ಈ ಮೂಲಕ ಸುಲಿಲಿತವಾದ ಹಸಿರು ಪಯಣವನ್ನು ಖಾತ್ರಿಪಡಿಸುತ್ತದೆ.

ಇ-ಕೋಚ್
ಇನ್ನು ಡೀಸೆಲ್ ಕೋಚ್‌ಗಳಿಗೆ ಹೋಲಿದರೆ ಇ-ಕೋಚ್ ಬಸ್ ಹೆಚ್ಚು ಮಿತವ್ಯಯವೆನಿಸಿದೆ. ಎಂಜಿನ್ ಅಥವಾ ಗೇರ್ ಬಾಕ್ಸ್ ಇಲ್ಲದಿರುವುದರಿಂದ ನಿರ್ವಹಣಾ ವೆಚ್ಚ ಕೂಡಾ ಕಡಿಮೆಯೆನಿಸಿದೆ.

ಇ-ಕೋಚ್
ಹಾಗೆಯೇ ಮೂರು ತಾಸುಗಳಷ್ಟು ಚಾರ್ಜ್ ಮಾಡಿದ್ದಲ್ಲಿ ಎಸಿ ಆನ್ ಆಗಿರಿಸಿಯೂ 250ರಿಂದ 300 ಕೀ.ಮೀ. ದೂರವನ್ನು ಆರಾಮವಾಗಿ ಪಯಣಿಸಬಹುದು.

ಇ-ಕೋಚ್
ಪ್ರಸ್ತುತ ಬಸ್ ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ಬದಲಾಗಿ ಪ್ರಾಯೋಗಿಕವಾಗಿ ಕಂಪನಿಗಳು ತಮ್ಮ ವಾಣಿಜ್ಯ ಬಳಕೆಗಾಗಿ ಉಪಯೋಗಿಸುತ್ತಿದೆ. ಮುಂದಿನ ದಿನಗಳಲ್ಲಿ ಭಾರತದತ್ತೂ ಆಗಮಿಸುವ ನಿರೀಕ್ಷೆ ನಮ್ಮದು.

electric coach bus
ಇ-ಕೋಚ್

electric coach bus
ಇ-ಕೋಚ್


Click it and Unblock the Notifications








