ವೆಲೊಸ್ಟೆರ್ ಬದಿಗೆ; ಹೊಸ ಕಾರು ಲಾಂಚ್‌ಗೆ ಹ್ಯುಂಡೈ ಪ್ಲಾನ್
ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ ಇಂಡಿಯಾ, ಸದ್ಯದಲ್ಲೇ ಭಾರತಕ್ಕೆ ನೂತನ ಕಾರು ಪರಿಚಯಿಸುವ ಇರಾದೆ ಹೊಂದಿದೆ. ಆದರೆ ವೆಲೊಸ್ಟೆರ್ ಆವೃತ್ತಿಯನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದೆ.
ಹ್ಯುಂಡೈ ದೇಶಿಯ ಮಾರುಕಟ್ಟೆ ಹಿನ್ನಡೆ ದಾಖಲಿಸಿದೆ. ಇದನ್ನು ನಿಭಾಯಿಸಲು ಡೀಸೆಲ್ ಹಾಗೂ ಪೆಟ್ರೋಲ್ ಆವೃತ್ತಿಗಳಿಂದ ಸಾಧ್ಯ ಎಂಬುದು ಹ್ಯುಂಡೈ ಅಂದಾಜಿಸುತ್ತಿದೆ. ಇದೇ ಕಾರಣಕ್ಕಾಗಿ ಸಣ್ಣ ಕಾರುಗಳತ್ತ ಗಮನ ಕೇಂದ್ರಿತವಾಗಿದೆ.
ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ಹ್ಯುಂಡೈ ಐ10 ಹಾಗೂ ಐ20 ಹ್ಯಾಚ್‌ಬ್ಯಾಕ್ ಆವೃತ್ತಿಗಳು ಉತ್ತಮ ಮಾರುಕಟ್ಟೆ ಕಾಯ್ದುಕೊಂಡಿದೆ. ಇದರ ಯಶಸ್ಸು ಮುಂದುವರಿದಿರುವಂತೆಯೇ ಐ20 ಹಾಗೂ ಐ10 ಮಧ್ಯೆ ನೂತನ ಆವೃತ್ತಿ ಪರಿಚಯಿಸುವುದಾಗಿ ತಿಳಿಸಿದೆ.
ಇದರ ಹೊರತಾಗಿ ಕಾಂಪಾಕ್ಟ್ ಎಸ್‌ಯುವಿ, ಎಂಪಿವಿ ಹಾಗೂ ಸಬ್ 4 ಮೀಟರ್ ಸೆಡಾನ್ ಕಾರು ಲಾಂಚ್ ಮಾಡುವುದು ಹ್ಯುಂಡೈ ಗುರಿಯಾಗಿರಲಿದೆ.


Click it and Unblock the Notifications









