ಸದ್ಯದಲ್ಲೇ ಹ್ಯುಂಡೈ ಡೀಸೆಲ್ ಕಾರು ಘಟಕ ಆರಂಭ

By Nagaraja

ಸದ್ಯದಲ್ಲೇ ಭಾರತದಲ್ಲಿ ಡೀಸೆಲ್ ಕಾರು ಘಟಕವನ್ನು ದಕ್ಷಿಣ ಕೊರಿಯಾ ಮೂಲದ ಆಟೋ ದೈತ್ಯ ಹ್ಯುಂಡೈ ಆರಂಭಿಸಲಿದೆ. 2013ನೇ ಕೇಂದ್ರ ಬಜೆಟ್‌ನಲ್ಲಿ ಡೀಸೆಲ್ ಎಂಜಿನ್ ಕಾರುಗಳಿಗೆ ಯಾವುದೇ ಹೆಚ್ಚುವರಿ ತೆರಿಗೆ ಹೇರದಿರುವ ಹಿನ್ನಲೆಯಲ್ಲಿ ಹ್ಯುಂಡೈನಿಂದ ಇಂತಹದೊಂದು ನಿಲುವು ಕಂಡುಬಂದಿದೆ.

ಪ್ರಸ್ತುತ ಹ್ಯುಂಡೈ ಐ20, ಸಾಂಟಾ ಫೆ, ಎಲಂಟ್ರಾ ಹಾಗೂ ವರ್ನಾ ಸೆಡಾನ್ ಕಾರುಗಳು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದ್ದು, ವಿದೇಶದಿಂದ ಆಮದಾಗುತ್ತಿದೆ. ಇದನ್ನು ತಡೆಗಟ್ಟಲು ದೇಶದಲ್ಲಿ ಡೀಸೆಲ್ ಕಾರು ಘಟಕ ಆರಂಭಿಸಲಿದೆ.

ಡೀಸೆಲ್ ಎಂಜಿನ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹ್ಯುಂಡೈ ಹೊಸ ಘಟಕದಲ್ಲಿ 1.1, 1.4 ಹಾಗೂ 1.6 ಡೀಸೆಲ್ ಎಂಜಿನ್‌ಗಳು ನಿರ್ಮಾಣವಾಗಲಿದೆ. ನೂತನ ಘಟಕವು ವಾರ್ಷಿಕವಾಗಿ 3 ಲಕ್ಷ ಯುನಿಟ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಮಾರಾಟದಲ್ಲೂ ಹೆಚ್ಚಿನ ಪ್ರಗತಿ ಸಾಧಿಸಲು ಹ್ಯುಂಡೈಗೆ ನೆರವು ಮಾಡಲಿದೆ.

ಅಂದ ಹಾಗೆ ಪ್ರಸಕ್ತ ಸಾಲಿನಲ್ಲೇ ಹ್ಯುಂಡೈ ನೂತನ ಕಾರುಗಳು ಆಗಮನವಾಗಲಿದೆ. ಐ10 ಹಾಗೂ ಐ20 ನಡುವೆ ಕಾಣಿಸಿಕೊಂಡಿರುವ ಹೊಸ ಹ್ಯಾಚ್‌ಬ್ಯಾಕ್ ಸೇರಿದಂತೆ ಯುಟಿಲಿಟಿ ಕಾರು ಕೂಡಾ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

Article Published On: Tuesday, July 9, 2013, 12:12 [IST]
English summary
South Korean auto giants, Hyundai, is set to launch their new diesel engine plant in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+