2020ರಲ್ಲಿ ದೇಶದ ವಾಹನಗಳ ಸಂಖ್ಯೆ 3 ಪಟ್ಟು ಹೆಚ್ಚು!
ಪ್ರಸ್ತುತ ಭಾರತೀಯ ಕಾರು ಮಾರುಕಟ್ಟೆಯು ಕುಸಿತವನ್ನು ಕಂಡಿರಬಹುದು. ಆದರೆ ಜಾಗತಿಕ ಮಾರುಕಟ್ಟೆ ಮಾಹಿತಿ ಸರ್ವೀಸ್ ಕಂಪನಿ ಜೆಡಿ ಪವರ್ ಪ್ರಕಾರ, 2020ರ ವೇಳೆಗೆ ದೇಶದ ವಾಹನಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದೆ.
ಈ ಅವಧಿಯ ವೇಳೆಗೆ ಭಾರತದ ಆಟೋ ಮೊಬೈಲ್ ಜಗತ್ತು ಶೇಕಡಾ 16ರಷ್ಟು ಹೆಚ್ಚಾಗಲಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾಗಿರುವ ಜೆಡಿ ಪವರ್ ವಿವರಿಸಿದೆ.
ಕಾಲಕ್ರಮೇಣದಲ್ಲಿ ಭಾರತವು ಸ್ಥಿರ ಪ್ರಗತಿ ಸಾಧಿಸುತ್ತಿದೆ. ಇದು 2020ರ ವೇಳೆಗೆ ಭಾರತೀಯ ಆಟೋಮೊಬೈಲ್ ಜಗತ್ತನ್ನು ಮೂರು ಪಟ್ಟು ಹೆಚ್ಚು ಮಾಡುವಲ್ಲಿ ನೆರವಾಗಲಿದೆ ಎಂದು ಜೆಡಿ ಪವರ್ ಏಷಿಯಾ ಫೆಸಿಫಿಕ್ ಉಪಾಧ್ಯಾಕ್ಷ ಹಾಗೂ ಜನರಲ್ ಮ್ಯಾನೇಜರ್ ಆಗಿರುವ ಜೆಫ್ ಬ್ರಾಡೊರಿಕ್ ತಿಳಿಸಿದ್ದಾರೆ.
ಭಾರತವು ಆರ್ಥಿಕ ಪ್ರಗತಿ ಸಾಧಿಸಿರುವಂತೆಯೇ ಜನರ ಹಣಕಾಸು ವ್ಯವಸ್ಥೆಯಲ್ಲೂ ಸುಧಾರಣೆ ಕಾಣುತ್ತಿದೆ. ಯುವ ಜನಾಂಗದಲ್ಲಿರುವ ಇಂತಹ ಗಮನಾರ್ಹ ಪ್ರಮಾಣದ ಮೊತ್ತವು ಕಾರು ಖರೀದಿ ಮಾಡುವಲ್ಲಿ ನೆರವಾಗಲಿದೆ ಎಂದಿದೆ.
ಹಾಗೆಯೇ ಮೂಲಸೌಕರ್ಯ ಅಭಿವೃದ್ಧಿ ಕೂಡಾ ದೊಡ್ಡ ಪಾತ್ರ ವಹಿಸಲಿದೆ ಎಂಬುದನ್ನು ಕೂಡಾ ಜೆಡಿ ಪವರ್ ತಿಳಿಸಿದೆ. ಫೆಬ್ರವರಿ ತಿಂಗಳಲ್ಲಿ ಶೇಕಡಾ 25.71ರಷ್ಟು ಮಾರಾಟ ಕುಸಿದಿರುವಂತೆಯೇ ಜೆಡಿ ಪವರ್ ಇಂತಹದೊಂದು ವರದಿ ಹೊರಬಂದಿದೆ.


Click it and Unblock the Notifications









