ದೇಶದಲ್ಲೇ ಸಿದ್ಧವಾಯ್ತು 300 ಕೀ.ಮೀ. ಮೈಲೇಜ್ ಕಾರು
ದೇಶದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆಗೆ ಮತ್ತೊಂದು ಕೋಡು ಬಂದಿದ್ದು, ಮುಂಬೈನ ಕೆಜೆ ಸೋಮಯ್ಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು 300 ಕೀ.ಮೀ. ಮೈಲೇಜ್ ನೀಡುವ ನೂತನ ಕಾರೊಂದನ್ನು ಸಿದ್ಧಪಡಿಸಿದ್ದಾರೆ.
ಜುಗಾದ್ (Jugaad) ಎಂದು ಹೆಸರಿಸಲ್ಪಟ್ಟಿರುವ ಈ ಕಾರಿನ ಮೊದಲ ಮಾದರಿಯನ್ನು ಈಗಾಗಲೇ ಯಶಸ್ವಿಯಾಗಿ ಪರೀಕ್ಷಿಸಲಾಗಿದ್ದು, ಕೌಲಾಂಲಪುರದಲ್ಲಿ ಜುಲೈನಲ್ಲಿ ಸಾಗಲಿರುವ ಶೆಲ್ ಇಕೊ ಮ್ಯಾರಾಥನ್ ಕಾರು ರೇಸ್‌ನಲ್ಲಿ ಭಾಗವಹಿಸಲಿದೆ.
ಸೆಪಾಂಗ್ ಅಂತರಾಷ್ಟ್ರೀಯ ಫಾರ್ಮುಲಾ ಒನ್ ರೇಸ್ ಸರ್ಕ್ಯೂಟ್‌ನಲ್ಲಿ ಸ್ಪರ್ಧೆ ಆಯೋಜನೆಯಾಗಲಿದೆ. ಇನ್ನಿತರ ದೇಶದವರು ನಿರ್ಮಿನಿಸಿರುವ ಸಮಾನ ಕಾರುಗಳೊಂದಿಗೆ ಜುಗಾದ್ ಸ್ಪರ್ಧಿಸಲಿದೆ.
ಸಂಪೂರ್ಣವಾಗಿ ಫೈಬರ್ ಗ್ಲಾಸ್‌ನಿಂದ ನಿರ್ಮಿಸಲ್ಪಟ್ಟಿರುವ ಜುಗಾದ್ 60 ಕೆ.ಜಿ ತೂಕವಿದೆ. ಇದು ಒಂದು ಲೀಟರ್ ಪೆಟ್ರೋಲ್‌ಗೆ 300 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಯೋಜನೆಗೆ 4 ಲಕ್ಷ ರು.ಗಳನ್ನು ವೆಚ್ಚ ಮಾಡಲಾಗಿದೆ. ಹಾಗೆಯೇ ಸಂಪೂರ್ಣ ಸಸ್ಪೆಷನ್ ಹಾಗೂ ಇತರ ಫೀಚರ್‌ಗಳನ್ನು ಜೋಡಣೆ ಮಾಡಲಾದ ಬಳಿಕ ರಸ್ತೆಗಳಲ್ಲಿ 70ರಿಂದ 80 ಕೀ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ.


Click it and Unblock the Notifications









