ಗಲರ್ಡೊ ಸೂಪರ್ ಕಾರಿನ ಓಟ ನಿಲ್ಲಿಸಿದ ಲಂಬೊರ್ಗಿನಿ
ಇನ್ನು ಮುಂದೆ ಗಲರ್ಡೊ ಸೂಪರ್ ಕಾರುಗಳು ಕಾಣಸಿಗುವುದು ಕಷ್ಟಕರವಾಗಲಿದೆ. ಯಾಕೆಂದರೆ ಗಲರ್ಡೊ ಉತ್ಪಾದನೆಗೆ ಇಟಲಿಯ ಈ ದೈತ್ಯ ಸೂಪರ್ ಕಾರು ಸಂಸ್ಥೆಯಾದ ಲಂಬೊರ್ಗಿನಿ ಪೂರ್ಣ ವಿರಾಮ ಹಾಕಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ
ಲಂಬೊರ್ಗಿನಿ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಗಲರ್ಡೊ ಫೈಟಿಂಗ್ ಬುಲ್‌ನಿಂದ ಸ್ಫೂರ್ತಿಯಿಂದ ಹೆಸರು ಪಡೆಯಲಾಗಿತ್ತು.

2003ನೇ ಇಸವಿಯಲ್ಲಿ ರಸ್ತೆಗಿಳಿದಿದ್ದ ವಿ10 ಗಲರ್ಡೊ ಇದುವರೆಗೆ 14,002 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ಸ್ಪೋರ್ಟ್ಸ್ ಉತ್ತಾರಾಧಿಕಾರಿಯಾಗಿ ವಿ12 ಎಂಜಿನ್ ಹೊಂದಿರುವ ಕ್ಯಾಬ್ರೆರಾ (cabrera) ಕಾಣಿಸಿಕೊಳ್ಳಲಿದೆ.
ಎರಡು ಡೋರಿನ ಈ ಕೂಪೆ ಕಾರು 5.0 ಲೀಟರ್ ವಿ10 ಎಂಜಿನ್ ಹೊಂದಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಎಂಜಿನ್ ಪಡೆದಿತ್ತು. ಸದ್ಯ 50ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಲಂಬೊರ್ಗಿನಿ ಮುಂದಿನ ವರ್ಷ ನೂತನ ಮಾದರಿಯನ್ನು ಪರಿಚಯಿಸುವ ಸಾಧ್ಯತೆಯಿದೆ.


Click it and Unblock the Notifications








