ಲಂಬೋರ್ಗಿನಿ ಸೂಪರ್ ಕಾರಿಗೆ ಜಸ್ಟ್ 3 ಕೋಟಿ ಮಾತ್ರ!
50ನೇ ಯಶಸ್ವಿ ವರ್ಷಾಚರಣೆಯ ಸಂಭ್ರಮದಲ್ಲಿರುವ ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾದ ಲಂಬೋರ್ಗಿನಿ, ಭಾರತಕ್ಕೆ ಲಿಮಿಟೆಡ್ ಎಡಿಷನ್ ಗಲರ್ಡೊ ಎಲ್‌ಪಿ550-2 ಪರಿಚಯಿಸಿದೆ. ಇದರ ಮುಂಬೈ ಎಕ್ಸ್ ಶೋ ರೂಂ ಪ್ರಾರಂಭಿಕ ದರ 3.06 ಕೋಟಿ ರು.ಗಳಾಗಿವೆ.
ಪ್ರಮುಖವಾಗಿಯೂ ದೇಶದ ಸೂಪರ್ ಕಾರು ಉತ್ಸಾಹಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ತಯಾರಿಸಲಾಗಿದೆ. ಒಟ್ಟು ಮೂರು ಕಲರ್ ವೆರಿಯಂಟ್‌ಗಳಲ್ಲಿ ಲಂಬೋರ್ಗಿನಿ ಗಲರ್ಡೊ ಆಗಮನವಾಗುತ್ತಿದೆ. ಅವುಗಳೆಂದೆರೆ
Arancio Borealis (Pearl Orange),
Bianco Monocerus (White),
Verde Ithaca (Pearl Green)
ಬಲ ಬದಿ ಡ್ರೈವಿಂಗ್ ವ್ಯವಸ್ಥೆ ಹೊಂದಿರುವ ಈ ಸೂಪರ್ ಕಾರಿನ ಕೇವಲ 6 ಯುನಿಟ್‌ಗಳಷ್ಟೇ ಲಭ್ಯವಿದೆ. ಲಂಬೋರ್ಗಿನಿ ಭಾರತ ಎಡಿಷನ್ ಸಂಪೂರ್ಣವಾಗಿ ಕಪ್ಪು ಬಣ್ಣದ ಇಂಟಿರಿಯರ್ ಹೊಂದಿದೆ.
ನೂತನ ಲಂಬೋರ್ಗಿನಿ ಕಾರು 5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 542 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ 3.9 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ 320 ಕೀ.ಮೀ. ವೇಗದಲ್ಲಿ ಚಲಿಸಲಿದೆ.


Click it and Unblock the Notifications









