ಲೇಲ್ಯಾಂಡ್ ಓವರ್‌ಟೇಕ್ ಮಾಡಿದ ಮಹೀಂದ್ರ ನಂ.2

ದೇಶದ ವಾಣಿಜ್ಯ ವಾಹನ ಸೆಗ್ಮೆಂಟ್‌ನಲ್ಲಿ ಅಶೋಕ್ ಲೇಲ್ಯಾಂಡ್ (ಎಎಲ್‌ಎಲ್) ಓವರ್‌ಟೇಕ್ ಮಾಡಿರುವ ಮಹೀಂದ್ರ ಆಂಡ್ ಮಹೀಂದ್ರ (ಎಂ ಆಂಡ್ ಎಂ) ಕಂಪನಿಯು ನಂ. 2 ಸ್ಥಾನ ವಶಪಡಿಸಿಕೊಂಡಿದೆ.

ಕಳೆದೊಂದು ವರ್ಷದಲ್ಲಿ ದೇಶದ ಘನ ವಾಹನ ಭಾರಿ ಹಿನ್ನಡೆ ಅನುಭವಿಸಿದೆ. ಈ ನಡುವೆ ಟಾಟಾ ಮೋಟಾರ್ಸ್ ಬಳಿಕ ದೇಶದ ಎರಡನೇ ಅತಿ ದೊಡ್ಡ ವಾಣಿಜ್ಯ ವಾಹನ ಕಂಪನಿ ಎಂದೆನಿಸಿಕೊಳ್ಳುವಲ್ಲಿ ಮಹೀಂದ್ರ ಯಶಸ್ವಿಯಾಗಿದೆ.

2012 ಎಪ್ರಿಲ್‌ರಿಂದ 2013 ಫೆಬ್ರವರಿ ವರೆಗಿನ ಅವಧಿಯಲ್ಲಿ ಮಹೀಂದ್ರವು 1,67,588 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಮತ್ತೊಂದೆಡೆ ಅಶೋಕ್ ಲೇಲ್ಯಾಂಡ್ 1,00,592 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಈ ಮೇಲಿನ ವರದಿಯು ದೇಶಿಯ ಮಾರಾಟದ್ದಾಗಿದ್ದು, ರಫ್ತು ಸೇರಿಕೊಂಡಿಲ್ಲ.

ಹಾಗಿದ್ದರೂ ತಾವೇ ನಂ.2 ಎಂದು ಅಶೋಕ್ ಲೇಲ್ಯಾಂಡ್ ಸಮರ್ಥಿಸಿಕೊಳ್ಳುತ್ತಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಮಾರಾಟ ಇನ್ನಷ್ಟು ವೃದ್ಧಿಸುವ ನಿರೀಕ್ಷೆ ಹೊಂದಿದೆ.

More from DriveSpark

Article Published On: Thursday, March 28, 2013, 14:21 [IST]
English summary
Mahindra & Mahindra has replaced Ashok Leyland (ALL) as the second largest commercial vehicle company after Tata Motors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+