ಮಹೀಂದ್ರದಿಂದ ಬರಲಿದೆ 6 ನೂತನ ಟ್ರಾಕ್ಟರುಗಳು
ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಧೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ, ಆರು ನೂತನ ಟ್ರಾಕ್ಟರುಗಳನ್ನು ಬಿಡುಗಡೆ ಮಾಡುವ ಯೋಜನೆ ಇರಿಸಿಕೊಂಡಿದೆ.
ಹೊಸತಾದ ಎಂ ಸ್ಟಾರ್ ಫ್ಲಾಟ್‌ಫಾರ್ಮ್‌ನಲ್ಲಿ ನೂತನ ಟ್ರಾಕ್ಟರ್ ಲಾಂಚ್ ಆಗಲಿದೆ. ಕಳೆದ ಎರಡು ವರ್ಷಗಳಿಂದ ಈ ವಿಭಾಗದಲ್ಲಿ ಕಾರ್ಯ ಮಗ್ನವಾಗಿರುವ ಮಹೀಂದ್ರ ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಉಳಿದ ಐದು ಟ್ರಾಕ್ಟುರುಗಳು ಈಗಿರುವ ಮಾದರಿಗಳ ವಿವಿಧ ವೆರಿಯಂಟ್‌ಗಳನ್ನು ಒಳಗೊಂಡಿರಲಿದೆ.
ಹೊಸ ಉತ್ಪಾದನೆ ತಯಾರು ಮಾಡಲು ಎಷ್ಟು ಕೋಟಿ ಹೂಡಿಕೆ ಮಾಡಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಬರದಿದ್ದರೂ ಬಲ್ಲ ಮೂಲಗಳ ಪ್ರಕಾರ 350 ಕೋಟಿ ರು.ಗಳಷ್ಟು ವ್ಯಯ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರ ಟ್ರಾಕ್ಟರುಗಳ ಮಾರಾಟ ಏರುಗತಿ ಸಾಧಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 18,019 ಯುನಿಟ್ ಸೇಲಾಗಿದ್ದರೆ ಈ ಬಾರಿಯದು 22,471 ಯುನಿಟ್‌ಗಳಿಗೆ ಏರಿಕೆ ಕಂಡಿದೆ. ಈ ಮೂಲಕ ಶೇಕಡಾ 24.70ರಷ್ಟು ವೃದ್ಧಿ ಸಾಧಿಸಿತ್ತು.


Click it and Unblock the Notifications









