ಮಹೀಂದ್ರ ಬೊಲೆರೊ ಮಾಕ್ಸಿ ಟ್ರಕ್ ಲಾಂಚ್; ದರ 4.33 ಲಕ್ಷ ರು.

By Nagaraja

ನಗರ ಪ್ರದೇಶದ ಸಂಚಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಮಹೀಂದ್ರವು ನೂತನ ಬೊಲೆರೊ ಮ್ಯಾಕ್ಸಿ ಟ್ರಕ್ ಪ್ಲಸ್ ವಾಣಿಜ್ಯ ವಾಹನ ಲಾಂಚ್ ಮಾಡಿದೆ. ಇದರ ಬಿಎಸ್III ವರ್ಷನ್ ಹಾಗೂ ಬಿಎಸ್IV ವರ್ಷನ್ ಮುಂಬೈ ಎಕ್ಸ್ ಶೋ ರೂ. ದರ ಅನುಕ್ರಮವಾಗಿ 4.33 ಹಾಗೂ 4.43 ಲಕ್ಷ ರು.ಗಳಾಗಿವೆ.

ಪ್ರಮುಖವಾಗಿ ನಗರ ಸಾರಿಗೆ ಅಗತ್ಯವನ್ನು ಪೂರೈಸಲು ಮಹೀಂದ್ರ ಬೊಲೆರೊ ಮ್ಯಾಕ್ಸಿ ಟ್ರಾಕ್ ಪ್ಲಸ್ ನೆರವಾಗಲಿದೆ ಎಂದು ಕಂಪನಿಯು ತಿಳಿಸಿದೆ. ಇದು 2523 ಸಿಸಿ ಕಾಮನ್ ರೈಲ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 63 ಬಿಎಚ್‌ಪಿ (195 ಎನ್‌ಎಂ) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇದು 1150 ಕೆ.ಜಿ. ಭಾರವನ್ನು ಹೊತ್ತೊಯ್ಯಲು ಸಕ್ಷಮವಾಗಿದೆ. ಎಆರ್‌ಎಐ ಮಾನ್ಯತೆ ಪ್ರಕಾರ 17.7 ಮೈಲೇಜ್ ನೀಡಲು ಸಮರ್ಥವಾಗಿದೆ. ಉಳಿದಂತೆ ಲೋವರ್ ಟರ್ನಿಂಗ್ ರೇಡಿಯಸ್ (5.5 ಮೀಟರ್), ಪವರ್ ಸ್ಟೀರಿಂಗ್, ಡಿಜಿಟಲ್ ಇಮೊಬಿಲೈಜರ್ ಹಾಗೂ ಹೆಚ್ಚಿನ ಸುರಕ್ಷಾ ಮಾನದಂಡಗಳ್ನು ಹೊಂದಿದೆ.

ದೇಶದ ಪಿಕಪ್ ಮಾರುಕಟ್ಟೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. 2012-13ರ ಆರ್ಥಿಕ ಸಾಲಿನಲ್ಲಿ ಮಹೀಂದ್ರವು ಶೇಕಡಾ 54ರಷ್ಟು ಶೇರುಗಳನ್ನು ವಶಪಡಿಸಿಕೊಂಡಿತ್ತು. ಇದೀಗ ಗ್ರಾಹಕರ ಬೇಡಿಕೆಗಳಿಗನುಸಾರವಾಗಿ ನೂತನ ಆವೃತ್ತಿಗಳನ್ನು ಪರಿಚಯಿಸುತ್ತಿದೆ.

More from DriveSpark

Article Published On: Tuesday, May 7, 2013, 11:26 [IST]
English summary
Mahindra has launched its new Bolero Maxi Truck Plus pickup to cater to urban transportation requirements. The new Bolero Maxi Truck Plus has a starting price of INR 4.33 lakhs for the BSIII version and INR 4.43 lakhs for the BSIV version.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+