ಅಮೇಜಿಂಗ್; ಮಹೀಂದ್ರ ಕ್ವಾಂಟೊ ಮೈಲೇಜ್ 25.89 kmpl

By Nagaraja

ನಿಮಗೆ ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರದ ಜನಪ್ರಿಯ ಮಾದರಿ ಕ್ವಾಂಟೊ ಎಷ್ಟು ಮೈಲೇಜ್ ನೀಡಲು ಸಾಧ್ಯವಿದೆ ಎಂಬುದು ತಿಳಿದಿದೆಯೇ? ಭಾರತೀಯ ವಾಹನ ಅಧ್ಯಯನ ಸಂಸ್ಥೆ (ARAI) ಮಾನ್ಯತೆ ನೀಡಿರುವ ಪ್ರಕಾರ ಕ್ವಾಂಟೊ ಪ್ರತಿ ಲೀಟರ್‌ಗೆ 17.21 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇನ್ನು ನೈಜ ಪರಿಸ್ಥಿತಿಯಲ್ಲಿ 15ರ ಅಸುಪಾಸಿನಲ್ಲಿ ಮೈಲೇಜ್ ನೀಡುತ್ತದೆ.

ಆದರೆ ಇವೆಲ್ಲವನ್ನು ತಪ್ಪು ಎಂದು ಸಾಬೀತುಪಡಿಸಿರುವ ಮಹೀಂದ್ರ, ನೂತನ ಕ್ವಾಂಟೊ ಬರೋಬ್ಬರಿ 25.89 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ.


ಹೌದು, ನಮ್ಮ ಬೆಂಗಳೂರಿನಲ್ಲಿ ಮಹೀಂದ್ರ ಆಯೋಜಿಸಿದ ವಿಕೆಂಡ್ ಮೈಲೇಜ್ Rallyಯಲ್ಲಿ ಕ್ವಾಂಟೊ ಇದನ್ನು ನಿರೂಪಿಸಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ 11ರಂದು ನಡೆದ 'ಬೂಸ್ಟ್ ಯುವರ್ ಫ್ಯೂಯಲ್- ಕ್ವಾಂಟೊ ವಿಕೆಂಡ್ ಮೈಲೇಜ್ rallyಯಲ್ಲಿ' ಒಟ್ಟು 30ರಷ್ಟು ಕ್ವಾಂಟೊ ಮಾಲಿಕರು ತಮ್ಮ ಕಾರುಗಳೊಂದಿಗೆ ಭಾಗವಹಿಸಿದ್ದರು. ಹಾಗೆಯೇ 60 ಕೀ.ಮೀ. ಕ್ರಮಿಕರಿಸಿದ rallyಯಲ್ಲಿ ಕೊನೆಗೆ 25.89 ಕೀ.ಮೀ ಮೈಲೇಜ್ ದಾಖಲಿಸಿಕೊಂಡಿರುವ ಪಾರ್ತಿಬನ್ ಎಂಬವರು ವಿಜೇತರಾಗಿದ್ದಾರೆ. ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಅನುಕ್ರಮವಾಗಿ ಮೊಹಮ್ಮದ್ ಅನ್ಸಾರ್ (24.16 kmpl) ಹಾಗೂ ಸುರೆಂಧರ್ (24.06 kmpl) ಹಂಚಿಕೊಂಡಿದ್ದಾರೆ.

ಮಹೀಂದ್ರ ಕ್ವಾಂಟೊ...
ದೇಶದ ಮೊದಲ ಕಾಂಪಾಕ್ಟ್ ಎಸ್‌ಯುವಿ ಆಗಿರುವ ಮಹೀಂದ್ರ ಕ್ವಾಂಟೊ, 1.5 mCR100 ಡೀಸೆಲ್ ಎಂಜಿನ್‌ನಿಂದ (100ಪಿಎಸ್ ಪವರ್, 240 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡುತ್ತದೆ. ಇದರ ಗ್ರೌಂಡ್ ಕ್ಲಿಯರನ್ಸ್ 180 ಎಂಎಂ ಆಗಿದ್ದು, 5.4 ಮೀಟರ್ ಟರ್ನಿಂಗ್ ರೇಡಿಯಸ್ ಹೊಂದಿದೆ.

ನಾಲ್ಕು ಮೀಟರ್ ಪರಿಧಿಯೊಳಗೆ ಆಗಮನವಾಗಿರುವ ಕ್ವಾಂಟೊ, ತೆರಿಗೆ ವಿನಾಯಿತಿ ಪಡೆದುಕೊಳ್ಳುತ್ತಿದ್ದು 5+2 ಸಿಟ್ಟಿಂಗ್ ವ್ಯವಸ್ಥೆ ಹೊಂದಿದೆ. ಹಾಗೆಯೇ 'ಮೈಕ್ರೊ ಹೈಬ್ರಿಡ್' ಎಂಬ ಸ್ಟಾರ್ಟ್/ಸ್ಟಾಪ್ ಫೀಚರ್ ಪ್ರಮುಖ ವೈಶಿಷ್ಟ್ಯವಾಗಿದೆ.

More from DriveSpark

Article Published On: Friday, October 11, 2013, 17:27 [IST]
English summary
Mahindra Quanto has an ARAI certified mileage of 17.21 kmpl. In real life conditions the best you might be able to achieve is about 15 kmpl. But you will be surprised to know that with some really careful driving you could extract a mileage of over 25 kmpl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+