ಬಹುನಿರೀಕ್ಷಿತ ಮಹೀಂದ್ರ ರೇವಾ ಇ2ಒ ಲಾಂಚ್
ದೇಶದ ಪ್ರಮುಖ ಎಸ್‌ಯುವಿ ವಾಹನ ತಯಾರಕ ಕಂಪನಿಯಾದ ಮಹೀಂದ್ರ ಆಂಡ್ ಮಹೀಂದ್ರವು, ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ಜನಾಂಗದ ಆಕರ್ಷಕ ವಿದ್ಯುತ್ ಚಾಲಿತ ರೇವಾ ಇ2ಒ (Reva e2o) ಕಾರನ್ನು ಪರಿಚಯಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಭಾರಿ ಪ್ರಚಾರದಲ್ಲಿದ್ದ ಈ ಪರಿಸರ ಸ್ನೇಹಿ ಕಾರು ಕೊನೆಗೂ ರಸ್ತೆಗೆ ತಲುಪುವಲ್ಲಿ ಯಶಸ್ವಿಯಾಗಿದೆ. ದೇಶದ ಮಾರುಕಟ್ಟೆಯಲ್ಲಿ ಇದರ ಆನ್ ರೋಡ್ ದರ 5.96 ಲಕ್ಷ ರು.ಗಳಾಗಿವೆ.
ನೂತನ ಮಹೀಂದ್ರ ರೇವಾದಲ್ಲಿ ಲಿಥಿಯಂ ಇಯಾನ್ ಬ್ಯಾಟರಿ ಆಳವಡಿಸಲಾಗಿದ್ದು, ಸಂಪೂರ್ಣ ಚಾರ್ಜ್ ಮಾಡಿಸಿಕೊಂಡರೆ ಗರಿಷ್ಠ 100 ಕೀ.ಮೀ. ತನಕ ಚಲಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಆವೃತ್ತಿಯು ದೇಶದ ಗ್ರಾಹಕರನ್ನು ಸೆಳೆಯುವ ನಂಬಿಕೆಯನ್ನು ಕಂಪನಿ ಹೊಂದಿದೆ.
ಮಹೀಂದ್ರ ರೇವಾ ಇವಿ2 ಭವಿಷ್ಯದ ಕಾರು ಎಂದೇ ಬಿಂಬಿತವಾಗಿದೆ. ದೇಶದೆಲ್ಲೆಡೆ ತೈಲ ಬೆಲೆಬೇರಿಕೆ ಕಂಡುಬಂದಿರುವಂತೆಯೇ ಗ್ರಾಹಕರಿಗೆ ಈ ವಿದ್ಯುತ್ ಚಾಲಿತ ವಾಹನವು ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ. ಪ್ರಮುಖವಾಗಿಯೂ ನಗರ ಪ್ರದೇಶದಲ್ಲಿ ಇದರ ಪ್ರಭಾವ ಹೆಚ್ಚಾಗಿರಲಿದೆ.
ಮಹೀಂದ್ರ ರೇವಾ ಇ2ಒ ಪ್ರಮುಖ ವೈಶಿಷ್ಟ್ಯಗಳು:
- ದೇಶದ 29 ಡೀಲರ್‌ಶಿಪ್‌ಗಳಲ್ಲಿ ಲಭ್ಯ
- ಆನ್ ರೋಡ್ ದರ 5.96 ಲಕ್ಷ ರು.
- ಒಟ್ಟು ಏಳು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯ
- 2 ಡೋರ್ ಹ್ಯಾಚ್‌ಬ್ಯಾಕ್ ಕಾರು
- ನಾಲ್ಕು ಜನರಿಗೆ ಕುಳಿತುಕೊಳ್ಳುವ ಸ್ಥಳಾವಕಾಶ
- ಲಿಥಿಯಂ ಇಯಾನ್ ಬ್ಯಾಟರಿ ಆಳವಡಿಕೆ
- ಪ್ರತಿ ಗಂಟೆಗೆ ಗರಿಷ್ಠ ವೇಗ 100 ಕೀ.ಮೀ.
- ಸಂಪೂರ್ಣ ಚಾರ್ಜ್ ಆಗಲು 5 ಗಂಟೆ ಸಮಯ ಬೇಕು
- ಸಂಪೂರ್ಣ ಚಾರ್ಜ್ ಆದ ಬಳಿಕ 100 ಕೀ.ಮೀ. ತನಕ ನಿಶ್ಚಿಂತತೆಯಿಂದ ಪ್ರಯಾಣಿಸಬಹುದು.
- ಒಟ್ಟು ಭಾರ 830 ಕಿಲೋ ಗ್ರಾಂ
- ಮುಂಭಾಗದಲ್ಲಿ 215 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 180 ಎಂಎಂ ಡಿಸ್ಕ್ ಬ್ರೇಕ್ ಪ್ರಯೋಗ
- ಸಾಮಾನ್ಯ ಕಾರುಗಳಿಗಿಂತಲೂ ನಾಲ್ಕು ಪಟ್ಟು ಹೆಚ್ಚು ಮೈಲೇಜ್


Click it and Unblock the Notifications









