ಸಮಸ್ಯೆ ಸಮಸ್ಯೆ; ಮಹೀಂದ್ರ ಸ್ಕಾರ್ಪಿಯೊ ರಿಕಾಲ್

By Nagaraja

ಇತ್ತೀಚೆಗಷ್ಟೇ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ರಿಕಾಲ್ ಬಗ್ಗೆ ವರದಿ ಮಾಡಿದ್ದೆವು. ಇದರ ಬೆನ್ನಲ್ಲೇ ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಕೂಡಾ ತನ್ನ ಜನಪ್ರಿಯ ಸ್ಕಾರ್ಪಿಯೊದಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಹಿಂಪಡೆಯಲು ನಿರ್ಧರಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಮಹೀಂದ್ರ ಸ್ಕಾರ್ಪಿಯೊ ಇಎಕ್ಸ್ ವೆರಿಯಂಟ್‌ನ ಪ್ರೆಶರ್ ರೆಗೂಲೇಟಿಂಗ್ ವಾಲ್ವೆದಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ 900ರಷ್ಟು ಮಾದರಿಗಳನ್ನು ಹಿಂಪಡೆಯಲು ಕಂಪನಿ ನಿರ್ಧರಿಸಿದೆ. 2013 ಅಕ್ಟೋಬರ್ ಹಾಗೂ ನವೆಂಬರ್ ನಡುವೆ ನಿರ್ಮಾಣ ಮಾಡಲಾಗಿರುವ ಸ್ಕಾರ್ಪಿಯೊ ಕಾರುಗಳಲ್ಲಿ ಇಂತಹ ತೊಂದರೆಗಳು ಕಾಣಿಸಿಕೊಂಡಿದೆ.

Mahindra Scorpio EX Recall
ಕಂಪನಿಯ ಪ್ರಕಾರ, ಮುಂಜಾಗ್ರತಾ ಕ್ರಮವಾಗಿ ಹಿಂಪಡೆಯಲಾಗುತ್ತಿದ್ದು, ಸಮಸ್ಯೆಗೊಳಗಾಗಿರುವ ಕಾರಿನ ಮಾಲಿಕರನ್ನು ಸಂಪರ್ಕಿಸಿ ಸರಿಪಡಿಸಿಕೊಡಲಾಗುವುದು. ಅಲ್ಲದೆ ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಂಟ್ರಿ ಲೆವೆಲ್ ವೆರಿಯಂಟ್ ಆಗಿರುವ ಮಹೀಂದ್ರ ಸ್ಕಾರ್ಪಿಯೊ ಇಎಕ್ಸ್, 2.5 ಲೀಟರ್ 4 ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 75 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 8,08,572 ರು.ಗಳಾಗಿವೆ.

More from DriveSpark

Article Published On: Friday, December 6, 2013, 14:00 [IST]
English summary
Mahindra has issued a voluntary recall for its Scorpio SUV. The recall affects 900 units of the SUV and only the EX variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+