4 ಲಕ್ಷ ಮಾರಾಟ ಸಂಖ್ಯೆಯನ್ನು ದಾಟಿದ ಸ್ಕಾರ್ಪಿಯೊ
ಭಾರತೀಯ ಆಫ್ ರೋಡ್ ರಸ್ತೆಗಳ ರಾಜ ಮಹೀಂದ್ರ ಸ್ಕಾರ್ಪಿಯೊ, ನಾಲ್ಕು ಲಕ್ಷ ಯುನಿಟ್‌ಗಳ ಮಾರಾಟವನ್ನು ಸಾಧಿಸುವ ಮೂಲಕ ಮತ್ತೊಂದು ಮೈಲುಗಲ್ಲನ್ನು ಸ್ಥಾಪಿಸಿದೆ.
ಈಗಾಗಲೇ ಸಾಮಾಜಿಕ ಜಾಲತಾಣಗ ಫೇಸ್‌ಬುಕ್‌ನಲ್ಲಿ 2 ದಶಲಕ್ಷ ಅಭಿಮಾನಿಗಳನ್ನು ಹೊಂದಿರುವ ಸ್ಕಾರ್ಪಿಯೊ, ಇತ್ತೀಚೆಗಷ್ಟೇ ಹಬ್ಬದ ಆವೃತ್ತಿಗೆ ಮುಂಚಿತವಾಗಿ ವಿಶೇಷ ಆವೃತ್ತಿ ಬಿಡುಗಡೆಗೊಳಿಸಿತ್ತು.
ಉತ್ತರ ಪ್ರದೇಶ, ಉತ್ತರಾಖಂಡ್, ರಾಜಸ್ತಾನ, ಒರಿಸ್ಸಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ಛತ್ತೀಸಗಡ ಸೇರಿದಂತೆ ದೇಶದ ಉತ್ತರ ಪೂರ್ವ ರಾಜ್ಯಗಳಲ್ಲಿ ಸ್ಥಿರತೆಯ ಬೇಡಿಕೆಯನ್ನು ಕಾಪಾಡಿಕೊಳ್ಳುವಲ್ಲಿ ಸ್ಕಾರ್ಪಿಯೊ ಯಶಸ್ವಿಯಾಗಿದೆ.
ನಿಮ್ಮ ಮಾಹಿತಿಗಾಗಿ 2002ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಸ್ಕಾರ್ಪಿಯೊ, ಕೆಲವೇ ವರ್ಷಗಳಲ್ಲಿ ದೇಶದ ನೆಚ್ಚಿನ ಕಾರುಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.


Click it and Unblock the Notifications









