ಸರಕಾರ ವಿರುದ್ಧ ಯುದ್ಧ ಸಾರಿದ ಮಹೀಂದ್ರ

Written By:

ಅದ್ಯಾಕೋ ಸಮಯ ಸರಿಯಿಲ್ಲ ಅನಿಸುತ್ತಿದೆ. ಇದುವರೆಗೆ ಸರಕಾರದ ಸೌಲಭ್ಯಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದ ಮಹೀಂದ್ರ ಇದೀಗ ಅದರ ವಿರುದ್ಧವೇ ತಿರುಗಿ ಬೀಳುತ್ತಿದೆ.

ಒಂದು ಅರ್ಥದಲ್ಲಿ ಮಹೀಂದ್ರ ಸರಿಯಾದ ನಡೆಯಲ್ಲೇ ಮುನ್ನಡೆಯುತ್ತಿದೆ ಎನ್ನಬಹುದು. ಏಕೆಂದರೆ ಭವಿಷ್ಯದ ಪರಿಸರ ಸ್ನೇಹಿ ವಾಹನ ನಿರ್ಮಿಸುವುದರತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದ ಮಹೀಂದ್ರ ರೇವಾಗೆ ಸರಕಾರದಿಂದ ಲಭಿಸುತ್ತಿದ್ದ ಸಬ್ಸಿಡಿಗೆ ಕಳೆದ ವರ್ಷ ಪೂರ್ಣ ವಿರಾಮ ಬಿದ್ದಿತ್ತು.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಇದರಿಂದ ವಿಚಲಿತಗೊಂಡಿರುವ ಸಂಸ್ಥೆಯು ಸರಕಾರ ಸಬ್ಸಿಡಿ ಮರು ಆಳವಡಿಸುವ ವರೆಗೆ ವಿದ್ಯುತ್ ಚಾಲಿತ ವಾಹನಗಳ ಅಭಿವೃದ್ಧಿಗಳನ್ನು ನಿಲುಗಡೆಗೊಳಿಸಲಿದೆ ಎಂದು ಒಂದೇ ವಾಕ್ಯದಲ್ಲಿ ಉತ್ತರಿಸಿದೆ.

To Follow DriveSpark On Facebook, Click The Like Button
mahindra electric vehicle

ದೇಶಕ್ಕೆ ರೇವಾ ಇ2ಒ (e2o) ವಿದ್ಯುತ್ ಚಾಲಿತ ವಾಹನಗಳನ್ನು ಪರಿಚಿಸಿದ್ದ ಮಹೀಂದ್ರ, ವಾಹನೋದ್ಯಮದಲ್ಲಿ ಹೊಸ ಕ್ರಾಂತಿಯ ಅಲೆಯಿಬ್ಬಿಸಿತ್ತು. ಆದರೆ ದರ ದುಬಾರಿಯಾಗಿದ್ದರಿಂದ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು.

ಕೆಲವು ತಿಂಗಳುಗಳ ಹಿಂದೆಯಷ್ಟೇ ನಿಕಟ ಭವಿಷ್ಯದಲ್ಲಿ ವೆರಿಟೊ ಸೆಡಾನ್ ಸೇರಿದಂತೆ ಮ್ಯಾಕ್ಸಿಮೊ ಮತ್ತು ಗಿಯೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಲಾಂಚ್ ಮಾಡುವುದಾಗಿ ಮಹೀಂದ್ರ ಘೋಷಿಸಿತ್ತು. ಆದರೆ ಸರಕಾರದಿಂದ ಸಬ್ಸಿಡಿ ಲಭ್ಯವಿಲ್ಲವಾಗಿರುವುದರಿಂದ ತನ್ನ ಯೋಜನೆಗೆ ಬ್ರೇಕ್ ಹಾಕಲು ಕಂಪನಿ ನಿರ್ಧರಿಸಿದೆ.

ಅಂದ ಹಾಗೆ ಕೇವಲ 400 ಇ2ಒ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಮಾರಾಟ ಮಾಡುವಲ್ಲಿ ಮಹೀಂದ್ರ ಯಶಸ್ವಿಯಾಗಿತ್ತು. ಆನ್ ರೋಡ್ ದರ 8 ಲಕ್ಷ ರು. ಮೀರಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿತ್ತು.

ಹಾಗೊಂದು ವೇಳೆ ಸಬ್ಸಿಡಿ ನೀಡಲು ಸರಕಾರ ಮುಂದಾಗದಿದ್ದಲ್ಲಿ ಇ2ಒ ಭಾರತಕ್ಕೆ ಲಭ್ಯವಾದ ಏಕಮಾತ್ರ ಎಲೆಕ್ಟ್ರಿಕ್ ವಾಹನವಾಗಿರಲಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಎಚ್ಚರಿಕೆಯನ್ನು ರವಾನಿಸಿದೆ.

2020ರ ವೇಳೆಗೆ 70 ದಶಲಕ್ಷ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳನ್ನು ದೇಶದ ರಸ್ತೆಗಿಳಿಸುವುದು ಸರಕಾರದ ಯೋಜನೆಯಾಗಿದೆ. ಹಾಗಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಸಬ್ಸಿಡಿ ಹಿಂಪಡೆದಿರುವುದು ನಿರಾಸೆಗೆ ಕಾರಣವಾಗಿದೆ.

ಒಟ್ಟಾರೆಯಾಗಿ ಸದ್ಯಕ್ಕೀಗ ಬ್ರಿಟನ್ ಸೇರಿದ ಇತರ ಯುರೋಪ್ ಮಾರುಕಟ್ಟೆಗಳಲ್ಲಿ ಮಹೀಂದ್ರ ತನ್ನ ಎಲೆಕ್ಟ್ರಿಕ್ ಮಾರುಕಟ್ಟೆ ಕುದುರಿಸಿಕೊಳ್ಳುವ ಯೋಜನೆಯಲ್ಲಿದೆ.

English summary
Mahindra, the sole manufacturer of Reva e2o electric cars has decided it will not bring out any new electric vehicles till government aid arrives in the form of subsidy.
Story first published: Friday, November 15, 2013, 13:12 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark