ಜೂನ್ 5ಕ್ಕೆ ಮಹೀಂದ್ರ ವೆರಿಟೊ ವೈಬ್ ಲಾಂಚ್
ಫೋರ್ ಸಬ್ ಮೀಟರ್ ಕಾರಾದ ಮಹೀಂದ್ರ ವೆರಿಟೊ ವೈಬ್ ಜೂನ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಸಲಿದೆ. ಈ ಬಗ್ಗೆ ಕಂಪನಿಯು ಘೋಷಣೆ ಮಾಡಿದ್ದು, ಜೂನ್ 5ಕ್ಕೆ ಲಾಂಚ್ ಆಗಲಿದೆ.
ಮಹೀಂದ್ರ ವೆರಿಟೊ ವೈಬ್ ರಹಸ್ಯ ಚಿತ್ರಣ ಈಗಾಗಲೇ ಮಾಧ್ಯಮಗಳಲ್ಲಿ ಲೀಕ್ ಆಗಿರುವುದು ಹೆಚ್ಚಿನ ಕುತೂಹಲ ಮೂಡಲ ಕಾರಣವಾಗಿದೆ. ನಾಲ್ಕು ಮೀಟರ್ ಉದ್ದದ ಮಿತಿಯೊಳಗೆ ಕಾರು ನಿರ್ಮಾಣವಾಗಲಿರುವುದರಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.
ಇನ್ನು ಕಾರು ದರ ಹಾಗೂ ಸಂಪೂರ್ಣ ಮಾಹಿತಿಯು ಲಾಂಚ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ದೇಶದ ಮಾರುಕಟ್ಟೆಯಲ್ಲಿ ಹ್ಯಾಚ್ ಬ್ಯಾಕ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಮಹೀಂದ್ರ ಫೋರ್ ಸಬ್ ಮೀಟರ್ ಕಾರು ಹೇಗೆ ಗಮನ ಸೆಳೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ವೆರಿಟೊ ಫ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಮಹೀಂದ್ರ ವೆರಿಟೊ ವೈಬ್ ಸ್ಮರ್ಧಾತ್ಮಕ ದರಗಳಲ್ಲಿ ಆಗಮಿಸುವ ನಿರೀಕ್ಷೆಯಿದೆ. ಇದರಲ್ಲಿ 1.5 ಲೀಟರ್ ರೆನೊ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, ಪೆಟ್ರೋಲ್ ಆವೃತ್ತಿ ಕೂಡಾ ಆಗಮನವಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ.


Click it and Unblock the Notifications









