ಮಹೀಂದ್ರ ವೆರಿಟೊ ವೈಬ್ ಆಗಮನಕ್ಕೆ ಕ್ಷಣಗಣನೆ ಆರಂಭ

By Nagaraja

ಬಹುನಿರೀಕ್ಷಿತ ಮಹೀಂದ್ರ ವೆರಿಟೊ ವೈಬ್ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಕಾಂಪಾಕ್ಟ್ ಕಾರು ಬೆಂಗಳೂರಿನಲ್ಲಿ ಗುರುವಾರ ಲಾಂಚ್ ಆಗಲಿದೆ.

ಕಳೆದ ಕೆಲವು ತಿಂಗಳಲ್ಲಿ ಮಹೀಂದ್ರ ನೂತನ ಕಾರು ಭಾರಿ ಚರ್ಚೆಗೀಡಾಗಿತ್ತು. ಇದು ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಅಂದುಕೊಂಡಿದ್ದರೂ ಅಂತಿಮವಾಗಿ ಈ ಕಾಂಪಾಕ್ಟ್ ಸೆಡಾನ್ ಕಾರು ಮಾರುಕಟ್ಟೆಗೆ ಅಪ್ಪಳಿಸಲು ಸಜ್ಜಾಗಿ ನಿಂತಿದೆ.

ಸಬ್ ಫೋರ್ ಮೀಟರ್ ಮಿತಿಯೊಳಗೆ ಆಗಮನವಾಗಲಿರುವುದರಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ವೆರಿಟೊ ವೈಬ್‌ಗೆ ಸಾಧ್ಯವಾಗಲಿದೆ. ಇದರಿಂದ ಸ್ಪರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಪರಿಚಯವಾಗಲಿದೆ. ಇದರಿಂದಾಗಿ ಸಹಜವಾಗಿಯೇ ಹಿಂಭಾಗದಲ್ಲಿ ಬೂಟ್ ಸ್ಪೇಸ್‌ಗೆ ಕತ್ತರಿ ಬಿದ್ದಿದೆ. ಹಾಗಿದ್ದರೂ ಹೊಸ ವಿನ್ಯಾಸ ಹೆಚ್ಚು ಆಕರ್ಷಕವಾಗಿದ್ದು, ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದರೆ ನೂತನ ವೆರೆಟೊ ವೈಬ್‌ನ್ಲಲಿ ರೆನೊ ಕೆ9ಕೆ 1.5 ಲೀಟರ್ ಡೀಸೆಲ್ ಎಂಜಿನ್ ಬಳಕೆಯಾಗಲಿದೆ. ಹಾಗೆಯೇ ಹೆಚ್ಚು ಮೈಲೇಜ್ ಸಿಗಲಿದೆ. ಅಂದ ಹಾಗೆ ಮಹೀಂದ್ರ ವೆರಿಟೊ ವೈಬ್ ಮುಂಬೈನಲ್ಲಿ ಇಂದೇ ಲಾಂಚ್ ಆಗಲಿದ್ದು, ಸ್ಪರ್ಧಾತ್ಮಕ 5.5 ಲಕ್ಷ ರು.ಗಳಲ್ಲಿ ಆಗಮವಾಗುವ ನಿರೀಕ್ಷೆಯಿದೆ. ಹಾಗೆಯೇ ಮಾರುಕಟ್ಟೆಯಲ್ಲಿ ಟಾಟಾ ಇಂಡಿಕಾಗಳಂತಹ ಮಾಡೆಲ್‌ಗಳೊಂದಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Wednesday, June 5, 2013, 12:09 [IST]
English summary
Mahindra Verito Vibe, the compact saloon based on the full sized Verito, Bangalore will be launched tomorrow. The Verito Vibe launch only remains a formality since images of the hatchback-like sedan have been out in the open for quite some time now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+