ಮಾರುತಿ ಆಲ್ಟೊಗೆ ಬಂತು ಏರ್ ಬ್ಯಾಗ್ ತಂತ್ರಜ್ಞಾನ
ಸಾಮಾನ್ಯವಾಗಿ ಸಣ್ಣ ಪ್ರಯಾಣಿಕ ಕಾರುಗಳಲ್ಲಿ ಗರಿಷ್ಠ ಸುರಕ್ಷಾ ಮಾನದಂಡಗಳ ಕೊರತೆ ಕಾಡುತ್ತದೆ. ಕಡಿಮೆ ದರಗಳಲ್ಲಿ ಮಾರುಕಟ್ಟೆಗೆ ಅಪ್ಪಳಿಸುತ್ತಿರುವುದೇ ಇದಕ್ಕಿರುವ ಪ್ರಮುಖ ಕಾರಣವಾಗಿದೆ. ಆದರೆ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಜನಪ್ರಿಯ ಆಲ್ಟೊ ಆವೃತ್ತಿಗೆ ಏರ್ ಬ್ಯಾಗ್ ಸುರಕ್ಷತಾ ತಂತ್ರಜ್ಞಾನ ಆಳವಡಿಸಲು ನಿರ್ಧರಿಸಿದೆ.
ಮಾರುತಿಯ ಪೈಕಿ ಅತ್ಯಂತ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಆಲ್ಟೊ 800 ವಿಎಕ್ಸ್‌ಐ ಮಾದರಿಯಲ್ಲಿ ಏರ್ ಬ್ಯಾಗ್ ಲಭ್ಯವಾಗಲಿದೆ. ಅಂದರೆ ನೀವು ಬಯಸಿದ್ದಲ್ಲಿ ಡ್ರೈವರ್ ಬದಿಯ ಏರ್ ಬ್ಯಾಗ್ ಆಳವಡಿಸಬಹುದಾಗಿದೆ. ಆಲ್ಟೊ 800 ವಿಎಕ್ಸ್‌ಐ ವೆರಿಯಂಟ್ ಜೂನ್ ತಿಂಗಳಲ್ಲಿ ಲಾಂಚ್ ಆಗಿತ್ತು.
ಹಿತಿ (ಎಕ್ಸ್ ಶೋ ರೂಂ ಮುಂಬೈ)ಮಾರುತಿ ಆಲ್ಟೊ 800 ವಿಎಕ್ಸ್‌ಐ ನಾನ್ ಮೆಟಾಲಿಕ್- 3.35 ಲಕ್ಷ ರು.
ಮಾರುತಿ ಆಲ್ಟೊ 800 ವಿಎಕ್ಸ್‌ಐ ಮೆಟಾಲಿಕ್- 3.39 ಲಕ್ಷ ರು.
ಮಾರುತಿ ಆಲ್ಟೊ 800 ವಿಎಕ್ಸ್‌ಐ ನಾನ್ ಮೆಟಾಲಿಕ್ ಜತೆ ಏರ್‌ಬ್ಯಾಗ್- 3.54 ಲಕ್ಷ ರು.
ಮಾರುತಿ ಆಲ್ಟೊ 800 ವಿಎಕ್ಸ್‌ಐ ಮೆಟಾಲಿಕ್ ಜತೆಗೆ ಏರ್ ಬ್ಯಾಗ್- 3.58 ಲಕ್ಷ ರು.
ನಿಮ್ಮ ಮಾಹಿತಿಗಾಗಿ ಡ್ರೈವರ್ ಬದಿಯ ಏರ್ ಬ್ಯಾಗ್ ಸುರಕ್ಷತಾ ತಂತ್ರಜ್ಞಾನಕ್ಕಾಗಿ ಹೆಚ್ಚುವರಿ ರು. 19,000 ಪಾವತಿಸಬೇಕಾಗಿದೆ. ಇದರ ಜತೆ ಸಿಡಿ ಪ್ಲೇಯರ್ ಜತೆ ಇಂಟೆಗ್ರೇಟಡ್ ಮ್ಯೂಸಿಕ್ ಸಿಸ್ಟಂ, ಯುಎಸ್‌ಬಿ ಮತ್ತು ಆಕ್ಸ್ ಎರಡು ಸ್ಪೀಕರ್ಸ್, ಸೆಂಟ್ರಲ್ ಲಾಂಕಿಂಗ್, ರಿಯರ್ ಸ್ಪಾಯ್ಲರ್, ಬಾಡಿ ಸೈಡ್ ಮೌಲ್ಡಿಂಗ್, ಎಡಬದಿಯಲ್ಲಿ ವಿಂಗ್ ಮಿರರ್ ಹಾಗೂ ರಿಯರ್ ಪಾರ್ಸೆಲ್ ಟ್ರೇಗಳಂತಹ ಇತರ ಹೆಚ್ಚಿನ ಫೀಚರ್‌ಗಳಿವೆ.
ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಾಂಚ್ ಆಗಿದ್ದ ಅಲ್ಟೊ 800 ಎಲ್‌ಎಕ್ಸ್‌ಐ ವೆರಿಯಂಟ್‌ನಲ್ಲಿ ಏರ್ ಬ್ಯಾಗ್ ತಂತ್ರಜ್ಞಾನ ಆಪ್ಷನಲ್ ಆಗಿ ಆಳವಡಿಸಲಾಗಿತ್ತು. ಇದನ್ನು ನೀವು ಬಯಸಿತ್ತಿದ್ದಲ್ಲಿ ಕೆಳಕಂಡ ದರಗಳನ್ನು ಪಾವತಿಸಬೇಕಾಗಿದೆ.
ದರ ಮಾಹಿತಿ (ಎಕ್ಸ್ ಶೋ ರೂಂ ದರ ಮುಂಬೈ)
ಮಾರುತಿ ಆಲ್ಟೊ 800 ಎಲ್‌ಎಕ್ಸ್‌ಐ ಏರ್ ಬ್ಯಾಗ್ ನಾನ್ ಮೆಟಾಲಿಕ್- 3.38 ಲಕ್ಷ ರು.
ಮಾರುತಿ ಆಲ್ಟೊ 800 ಎಲ್‌ಎಕ್ಸ್‌ಐ ಏರ್ ಬ್ಯಾಗ್ ಮೆಟಾಲಿಕ್- 3.42 ಲಕ್ಷ ರು.


Click it and Unblock the Notifications

