ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿ ಹೋಂಡಾ ಬ್ರಿಯೊ ಕಣಕ್ಕೆ
ದೇಶದಲ್ಲಿ ಭಾರಿ ಸದ್ದು ಮಾಡಿರುವ ಮಾರುತಿ ಎರ್ಟಿಗಾ ಮಲ್ಟಿ ಪರ್ಪಸ್ ವಾಹನಕ್ಕೆ (ಎಂಪಿವಿ) ಸೆಡ್ಡು ನೀಡಲು ಹೋಂಡಾದಿಂದ ಇನ್ನೊಂದು ಕಾರು ಸಿದ್ಧಗೊಳ್ಳಲಿದೆ.
ಸೆಪ್ಟೋಂಬರ್ 19ರಿಂದ ಇಂಡೋನೇಷ್ಯಾದಲ್ಲಿ ಸಾಗಲಿರುವ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಪ್ರದರ್ಶನ ಕಾಣಲಿರುವ ನೂತನ ಹೋಂಡಾ ಬ್ರಿಯೊ ಎಂಪಿವಿ ನಿಕಟ ಭವಿಷ್ಯದಲ್ಲೇ ರಸ್ತೆಗಿಳಿಯಲಿದೆ.
ಮೊಬಿಲಿಯೊ...
ಇದೀಗ ಎಲ್ಲವೂ ಅಂತಿಗೊಂಡಿದ್ದು, ಹೋಂಡಾ ಬ್ರಿಯೊ ನೂತನ ಎಂಪಿವಿ ಇಂಡೋನೇಷ್ಯಾದಲ್ಲಿ 'ಮೊಬಿಲಿಯೊ' ಎಂಬ ಹೆಸರಿನಿಂದ ಅರಿಯಲ್ಪಡಲಿದೆ.
ಏಳು ಸೀಟು...
ಈ ಏಳು ಸೀಟಿನ ಎಂಪಿವಿ ಮುಂದಿನ ವರ್ಷ ದೇಶದಲ್ಲಿ ಲಾಂಚ್ ಆಗಲಿದ್ದು, ಪ್ರಮುಖವಾಗಿಯೂ ಮಾರುತಿ ಎರ್ಟಿಗಾಗೆ ನಿಕಟ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ.
ವೆರಿಯಂಟ್...
ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಹೋಂಡಾ ಮೊಬಿಲಿಯೊ ಎಂಪಿವಿ ಲಭ್ಯವಿರಲಿದೆ. ಅವುಗಳೆಂದರೆ ಎಸ್, ಇ ಮತ್ತು ಇ ಸಿವಿಟಿ. ಇದರ ಉತ್ಪಾದನೆಯು 2014ರಲ್ಲಿ ಆರಂಭವಾಗಲಿದೆ.
ಎಂಜಿನ್...
1.5 ಲೀಟರ್ ಪೆಟ್ರೋಲ್ ಎಂಜಿನ್ ಮೊಬಿಲಿಯೊದಲ್ಲಿ ಆಳವಡಿಸಲಾಗುತ್ತದೆ. ಹಾಗೆಯೇ ಭಾರತೀಯ ವರ್ಷನ್‌ನಲ್ಲಿ ಸದ್ಯ ಅಮೇಜ್‌ನಲ್ಲಿ ಲಭ್ಯವಾಗುತ್ತಿರುವ 1.5 ಲೀಟರ್ ಡೀಸೆಲ್ ಎಂಜಿನ್ ಕೂಡಾ ಇರಲಿದೆ.


Click it and Unblock the Notifications









