ಸದ್ಯದಲ್ಲೇ ಮಾರುತಿ ವ್ಯಾಗನಾರ್ ಡೀಸೆಲ್ ಕಾರು ಎಂಟ್ರಿ

By Nagaraja

ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಸದ್ಯದಲ್ಲೇ ತನ್ನ ಜನಪ್ರಿಯ ವ್ಯಾಗನಾರ್ ಆವೃತ್ತಿಯ ಡೀಸೆಲ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ಪೆಟ್ರೋಲ್ ಸಹಿತ ಡೀಸೆಲ್ ದರದಲ್ಲೂ ಗಣನೀಯ ವರ್ಧನೆಯುಂಟಾಗುತ್ತಿರುವ ಈ ಸಂದರ್ಭದಲ್ಲಿ ಮಾರುತಿಯ ಈ ಹೊಸ ನೀತಿಯು ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದು ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ.

ಪ್ರಸ್ತುತ ಸಣ್ಣ ಡೀಸೆಲ್ ಎಂಜಿನ್ ನಿರ್ಮಾಣದತ್ತ ಮಾರುತಿ ಕಾರ್ಯ ಮಗ್ನವಾಗಿದೆ. 1.0 ಟರ್ಬೊಚಾರ್ಜ್ಡ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್, ಆಲ್ಟೊ ಸೇರಿದಂತೆ ಎ ಸ್ಟಾರ್ ಹಾಗೂ ವ್ಯಾಗನಾರ್ ಆವೃತ್ತಿಯಲ್ಲೂ ಆಳವಡಿಕೆಯಾಗಲಿದೆ ಎಂದು ಆಟೋ ಮೂಲಗಳು ತಿಳಿಸುತ್ತಿವೆ.

ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಹಾಗಿದ್ದರೂ ಸ್ಥಳೀಯವಾಗಿ ನಿರ್ಮಿಸಲಾಗುತ್ತಿರುವ ಡೀಸೆಲ್ ಎಂಜಿನ್‌ಗಳನ್ನು ಆಳವಡಿಸಲಾಗುವುದು ಎಂಬುದಂತೂ ಸ್ಪಷ್ಟವಾಗಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಮುಂಬರುವ ಹಬ್ಬದ ಆವೃತ್ತಿ ವೇಳೆ ಮಾರುತಿ ವ್ಯಾಗನಾರ್ ಡೀಸೆಲ್ ಎಂಜಿನ್ ಬಿಡುಗಡೆಯಾಗಲಿದೆ. ಈ ಎಲ್ಲ ಬೆಳವಣಿಗೆಗಳನ್ನು ಆಟೋ ಜಗತ್ತು ಕುತೂಹಲದಿಂದ ಎದುರು ನೋಡುತ್ತಿದೆ.

More from DriveSpark

Article Published On: Thursday, July 4, 2013, 15:50 [IST]
English summary
Maruti Suzuki has been working on a small diesel engine and this will not just power their new compact hatchback, but even the existing Wagon R, A-Star and maybe even the Alto.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+