ಮಾರುತಿ ಆಲ್ಟೊ ಕೆ10 ಮ್ಯೂಸಿಕ್ ಎಡಿಷನ್ ಲಾಂಚ್
ದೇಶದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಈ ಹಬ್ಬದ ಆವೃತ್ತಿಗಾಗಿ ವಿಶೇಷವಾದ ಆಲ್ಟೊ ಕೆ10 ಮ್ಯೂಸಿಕ್ ಎಡಿಷನ್ ಕಾರನ್ನು ಲಾಂಚ್ ಮಾಡಿದೆ.
ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟಗೊಂಡಿರುವ ಕಾರೆಂಬ ಬಿರುದು ಪಡೆದುಕೊಂಡಿರುವ ಆಲ್ಟೊ, ಜನಸಾಮಾನ್ಯರ ನೆಚ್ಚಿನ ಕಾರೆನಿಸಿಕೊಂಡಿದೆ. ಈ ನಿಟ್ಟಿನಲ್ಲಿ ಮಾರುತಿಯ ಹೊಸ ಉಡುಗೊರೆ ಹಬ್ಬದ ಆವೃತ್ತಿಯಲ್ಲಿ ಜನರ ಸಂಭ್ರಮವನ್ನು ಇಮ್ಮಡಿಕೊಳಿಸಲಿದೆ. ನೂತನ ಆಲ್ಟೊ ಕೆ10 ಮ್ಯೂಸಿಕ್ ಎಡಿಷನ್ ಸಾಮಾನ್ಯ ಆವೃತ್ತಿಗಿಂತಲೂ ಸ್ವಲ್ಪ ದುಬಾರಿ ಎನಿಸಿಕೊಳ್ಳಲಿದೆ.
ಆಲ್ಟೊ ಕೆ10 ಮ್ಯೂಸಿಕ್ ಆವೃತ್ತಿಗಳಲ್ಲಿರುವ 10 ವೈಶಿಷ್ಟ್ಯಗಳು
- ಜೆವಿಸಿ ಎಂಪಿ3 ಪ್ಲೇಯರ್ ಜತೆ ಯುಎಸ್‌ಬಿ,
- ಎರಡು 4 ಇಂಚುಗಳ ಫ್ರಂಟ್ ಸ್ಪೀಕರ್,
- ಬಾಡಿ ಗ್ರಾಫಿಕ್ಸ್,
- ಸೀಟು ಕವರ್,
- ಆಂಬಿಯಂಟ್ ಲೈಟಿಂಗ್,
- ಸ್ಟೀರಿಂಗ್ ಕವರ್,
- ಆಲ್ಟೊ ಕೆ10 ಮ್ಯೂಸಿಕ್ ಡಿಕಾಲ್,
- ರಿಯರ್ ಸ್ಪಾಯ್ಲರ್,
- ಮಡ್ ಫ್ಲಾಪ್ಸ್,
- ಯುನಿವರ್ಸಲ್ ಮ್ಯಾಟ್ಸ್
ನಿಮ್ಮ ಮಾಹಿತಿಗಾಗಿ 2012 ಡಿಸೆಂಬರ್ ತಿಂಗಳಲ್ಲಿ ಆಲ್ಟೊ ಕೆ10 ನೈಟ್‌ರೇಸರ್ ಎಡಿಷನ್ ಲಾಂಚ್ ಮಾಡಲಾಗಿತ್ತು. ಅಂದ ಹಾಗೆ ಮಾರುತಿ ಆಲ್ಟೊ ಕೆ10 1.0 ಲೀಟರ್ ತ್ರಿ ಸಿಲಿಂಡರ್ ಕೆ ಸಿರೀಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 68 ಪಿಎಸ್ ಪವರ್ (90 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಮೈಲೇಜ್...
ಕಂಪನಿ ಪ್ರಕಾರ ಮಾರುತಿ ಆಲ್ಟೊ ಕೆ10 ಪ್ರತಿ ಲೀಟರ್‌ಗೆ 20.92 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ನೂತನ ಮ್ಯೂಸಿಕ್ ಎಡಿಷನ್ ವಿಶೇಷ ಪ್ಯಾಕೇಜ್ ಎಲ್‌ಎಕ್ಸ್‌ಐ ಹಾಗೂ ವಿಎಕ್ಸ್‌ಐ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದಕ್ಕೆ 17,516 ರು.ಗಳಷ್ಟು ಹೆಚ್ಚುವರಿ ದರ ಪಾವತಿಸಬೇಕಾಗುತ್ತದೆ. ಹಾಗಿದ್ದರೂ ಟಾಪ್ ವೆರಿಯಂಟ್‌ನಲ್ಲಿ ಸಮಾನ ಪ್ಯಾಕೇಜ್ ಆಳವಡಿಸಲು 12,419 ರು. ತಗುಲಲಿದೆ.
ನೂತನ ಆಲ್ಟೊ ಕೆ10 ಮ್ಯೂಸಿಕ್ ಎಡಿಷನ್ ಶ್ವೇತ ಹಾಗೂ ಬೆಳ್ಳಿಯ ದೇಹ ಬಣ್ಣಗಳನ್ನು ದೊರಕಲಿದೆ. ಹಾಗೆಯೇ ಎಕ್ಸ್‌ಚೇಂಜ್ ಆಫರ್ ಕೂಡಾ ಲಭ್ಯವಿರಲಿದೆ ಎಂದು ಮೂಲಗಳು ತಿಳಿಸಿವೆ.


Click it and Unblock the Notifications









