ಹಿಂಬಡ್ತಿ ಪಡೆದ ಮಾರುತಿ ಸುಜುಕಿ
ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ನವೆಂಬರ್ ಮಾರಾಟದಲ್ಲಿ ಶೇಕಡಾ 10.7ರಷ್ಟು ಕುಸಿತ ದಾಖಲಿಸಿಕೊಂಡಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಈ ಅವಧಿಯಲ್ಲಿ ಮಾರುತಿ ಒಟ್ಟು 92,140 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 1,03,200 ಯುನಿಟ್‌ಗಳ ಮಾರಾಟ ಗಿಟ್ಟಿಸಿಕೊಂಡಿತ್ತು.

ದೇಶ ಮಾರಾಟ ಕುಸಿತ...
ದೇಶಿಯ ಮಾರಾಟದಲ್ಲೂ ಮಾರುತಿ ಶೇಕಡಾ 5.9ರಷ್ಟು ಕುಸಿತ ದಾಖಲಿಸಿದ್ದು, 85,510 ಯುನಿಟ್ ಮಾರಾಟ ಕಂಡುಕೊಂಡಿದೆ. ಕಳೆದ ವರ್ಷವಿದು 90,882ರಷ್ಟಿತ್ತು.
ಸಣ್ಣ ಕಾರು ಏರಿಕೆ...
ಹಾಗಿದ್ದರೂ 800, ಆಲ್ಟೊ, ಎ ಸ್ಟಾರ್ ಮತ್ತು ವ್ಯಾಗನಾರ್ ಸೇರಿದಂತೆ ಸಣ್ಣ ಪ್ರಯಾಣಿಕ ಮಾರಾಟದಲ್ಲಿ ಮಾರುತಿ ಶೇಕಡಾ 3.7ರಷ್ಟು ಏರಿಕೆ ದಾಖಲಿಸಿದೆ. ಈ ಸಂಖ್ಯೆಯು ಕಳೆದ ಬಾರಿಯ 36,679 ಯುನಿಟ್‌ಗಳಿಂದ 38,040 ಯುನಿಟ್‌ಗಳಿಗೆ ಏರಿಕೆಯಾಗಿದೆ.
ಕಾಂಪಾಕ್ಟ್ ಕಾರ್ ಡೌನ್...
ಈ ನಡುವೆ ಸ್ವಿಫ್ಟ್, ಎಸ್ಟಿಲೊ ಮತ್ತು ರಿಟ್ಜ್ ಸೇರಿದ ಕಾಂಪಾಕ್ಟ್ ಕಾರುಗಳು ಶೇಕಡಾ 24ರಷ್ಟು ಕುಸಿತ ದಾಖಲಿಸಿದೆ. ಕಳೆದ ಬಾರಿಯಿದು 23,849 ಯುನಿಟ್‌ಗಳಾಗಿದ್ದರೆ ಈ ಸಲ 18,122 ಯುನಿಟ್‌ಗಳಿಗೆ ಇಳಿಕೆ ಕಂಡಿದೆ.
ಕಾಂಪಾಕ್ಟ್ ಸೆಡಾನ್ ಅಪ್...
ಇನ್ನೊಂದೆಡೆ ಕಾಂಪಾಕ್ಟ್ ಸೆಡಾನ್ ಡಿಜೈರ್ ಮಾರಾಟದಲ್ಲಿ ಶೇಕಡಾ 13.2ರಷ್ಟು ವರ್ಧನೆ ದಾಖಲಿಸಿದೆ. ಕಳೆದ ನವೆಂಬರ್‌ನಲ್ಲಿದ್ದ 13,502 ಯುನಿಟ್‌ಗಳಿಂದ 15,286 ಯುನಿಟ್‌ಗಳಿಗೆ ಏರಿಕೆ ಸಾಧಿಸಿದೆ.
ಮಿಡ್ ಸೈಜ್ ಕುಸಿತ...
ಅಂತೆಯೇ ಮಿಡ್ ಸೈಜ್ ಎಸ್‌ಎಕ್ಸ್4 ಮಾರಾಟದಲ್ಲೂ ಶೇಕಡಾ 71.1ರಷ್ಟು ಭಾರಿ ಕುಸಿತ ದಾಖಲಿಸಿದೆ. ಈ ಬಾರಿ ನವೆಂಬರ್ ತಿಂಗಳಲ್ಲಿ 200 ಯುನಿಟ್ ಮಾತ್ರ ದಾಖಲಿಸಿದ್ದರೆ ಕಳೆದ ವರ್ಷವಿದು 692 ಯುನಿಟ್‌ಗಳಾಗಿತ್ತು.
ಯುನಿಲಿಟಿ ವೆಹಿಕಲ್ ಸಹ ಕುಸಿತ...
ಇನ್ನು ಎರ್ಟಿಗಾ, ಗ್ರಾಂಡ್ ವಿಟರಾ ಮತ್ತು ಜಿಪ್ಸಿ ಸೇರಿದಂತೆ ಯುಟಿಲಿಟಿ ವಾಹಗಳು ಶೇಕಡಾ 21.5ರಷ್ಟು ಕುಸಿತ ದಾಖಲಿಸಿದೆ. ಕಳೆದ ವರ್ಷವಿದು 7,439 ಯುನಿಟ್‌ಗಳಾಗಿದ್ದರೆ ಈ ಬಾರಿ 5,840 ಯುನಿಟ್‌ಗಳಿಗೆ ಸೀಮಿತಗೊಂಡಿದೆ.
ವ್ಯಾನ್ ಹಿನ್ನಡೆ...
ಹಾಗೆಯೇ ಓಮ್ನಿ ಮತ್ತು ಇಕೊ ವ್ಯಾನ್ ಮಾರಾಟವು ಶೇಕಡಾ 7.3ರಷ್ಟು ಕುಸಿತ ದಾಖಲಿಸಿದೆ. 2012 ನವೆಂಬರ್‌ನಲ್ಲಿ 8,650 ಯುನಿಟ್‌ಗಳಿದ್ದ ಮಾರಾಟವು 8,021 ಯುನಿಟ್‌ಗಳಿಗೆ ಕುಸಿತ ಕಂಡಿದೆ.
ರಫ್ತು ಇಳಿಕೆ...
ಅಂತಿಮವಾಗಿ ನವೆಂಬರ್ ತಿಂಗಳ ರಫ್ತು ಪ್ರಕ್ರಿಯೆಯಲ್ಲೂ ಶೇಕಡಾ 46.2ರಷ್ಟು ಕುಸಿತ ಕಂಡಿರುವ ಮಾರುತಿ 6630 ಯುನಿಟ್ ಮಾತ್ರ ಮಾರಾಟ ಕಂಡುಕೊಂಡಿದೆ. ಕಳೆದ ಬಾರಿಯಿದು 12,318 ಯುನಿಟ್‌ಗಳಾಗಿದ್ದವು.


Click it and Unblock the Notifications








