ಸಣ್ಣ ಕಾರು ಸ್ಪೆಷಲಿಸ್ಟ್ ಮಾರುತಿಯಿಂದ ಬರಲಿದೆ 4 ಎಸ್‌ಯುವಿ

Written By:
ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಉತ್ಸಾಹಿ ಗ್ರಾಹಕರಿಗೆ ಸಿಹಿ ಸುದ್ದಿ ಬಂದಿದ್ದು, ದೇಶದ ಅಗ್ರಪಂಕ್ತಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಾಲ್ಕು ನೂತನ ಎಸ್‌ಯುವಿ ಕಾರುಗಳನ್ನು ಮಾರುಕಟ್ಟೆಗಿಳಿಸಲು ಯೋಚನೆ ಮಾಡುತ್ತಿದೆ.

ಈ ಮೂಲಕ ದೇಶದ ನಂ.1 ಎಸ್‌ಯುವಿ ಎನಿಸಿಕೊಳ್ಳುವುದು ಮಾರುತಿ ಗುರಿಯಾಗಿದೆ. ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಹೆಚ್ಚು ಹಿಡಿತವಿಲ್ಲದರ ಹೊರತಾಗಿಯೂ ಮಾರುತಿ ಮುಂದಿನ ಎರಡು ವರ್ಷಗಳಲ್ಲಿ ನಾಲ್ಕು ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

ಕೇವಲ ಜಿಪ್ಸಿ ಮಾತ್ರ ಪ್ರಸ್ತುತ ಮಾರುತಿಯಿಂದ ಬಿಡುಗಡೆಯಾಗಿರುವ ಎಸ್‌ಯುವಿ ಕಾರಾಗಿದೆ. ಅಷ್ಟೇ ಯಾಕೆ ಕಳೆದ ಕೆಲವು ವರ್ಷಗಳಲ್ಲಿ ಜಿಪ್ಸಿ ಅಪ್‌ಗ್ರೇಡ್ ವರ್ಷನ್ ಕೂಡಾ ಆಗಮನವಾಗಿಲ್ಲ. ಸಣ್ಣ ಹಾಗೂ ಕಾಂಪಾಕ್ಟ್ ಕಾರುಗಳತ್ತ ಹೆಚ್ಚಿನ ಗಮನ ಹರಿಸಿರುವುದು ಇದಕ್ಕಿರುವ ಪ್ರಮುಖ ಕಾರಣವಾಗಿದೆ. ಆದರೆ ದೇಶದಲ್ಲಿ ಎಸ್‌ಯುವಿ ಬೇಡಿಕೆಯನ್ನು ಗಮನಿಸಿರುವ ಮಾರುತಿ ತನ್ನ ಗೇರ್ ಚೇಂಜ್ ಮಾಡಲು ನಿರ್ಧರಿಸಿದೆ.

ಕಳೆದ ವರ್ಷ ಸಾಗಿದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಎಕ್ಸ್ಎ ಅಲ್ಫಾ ಕಾನ್ಸೆಪ್ಟ್ ಪ್ರದರ್ಶಿಸಿದ್ದ ಮಾರುತಿ, ಎಸ್‌ಯುವಿ ಸೆಗ್ಮೆಂಟ್‌ನಲ್ಲಿರುವ ತನ್ನ ಆಸಕ್ತಿಯನ್ನು ತೋರ್ಪಡಿಸಿತ್ತು. ನಾಲ್ಕು ಮೀಟರ್ ಉದ್ದದ ಪರಿಮಿತಿಯೊಳಗೆ ಈ ಕಾಂಪಾಕ್ಟ್ ಎಸ್‌ಯುವಿ ಲಭ್ಯವಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಪ್ರಸ್ತುತ ಕಾರು 2014ನೇ ಇಸವಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದೇವೆ.

ನಿಕಟ ಭವಿಷ್ಯದಲ್ಲಿ ಮಾರುತಿ ಸುಜುಕಿ ಮಾತೃ ಸಂಸ್ಥೆಯಾದ ಜಪಾನ್‌ನ ಸುಜುಕಿಯಿಂದ ಇನ್ನಷ್ಟು ಎಸ್‌ಯುವಿ ಕಾರುಗಳು ಪರಿಚಯವಾಗುವ ನಿರೀಕ್ಷೆಯಿದೆ. ಈಗಾಗಲೇ ಯುರೋಪ್‌ನಲ್ಲಿ ಎಸ್‌ಎಕ್ಸ್4 ಸೆಡಾನ್ ಕ್ರಾಸೋವರ್ ವರ್ಷನ್ ಅನಾವರಣಗೊಂಡಿದ್ದು, ಭಾರತಕ್ಕೂ ಆಗಮನವಾಗುವ ಸಾಧ್ಯತೆಯಿದೆ.

ಹಾಗೆಯೇ ಸ್ವಿಫ್ಟ್ ಡಿಜೈರ್ ಪ್ಲಾಟ್ ಫಾರ್ಮ್‌ನಲ್ಲಿ ಮಾರುತಿಯಿಂದ ಮೂರನೇ ಎಸ್‌ಯುವಿ ಕಾರು ನಿರ್ಮಾಣವಾಗುವ ಸಾಧ್ಯತೆಯಿದೆ. ಹಾಗೆಯೇ ಕಾಂಪಾಕ್ಟ್ ಪ್ರೀಮಿಯಂ ಎಸ್‌ಯುವಿ ಕೂಡಾ ನಿರೀಕ್ಷಿಸಲಾಗುತ್ತಿದೆ. ಇವೆಲ್ಲವೂ ಸಣ್ಣ ಕಾರು ಸ್ಪೆಷಲಿಸ್ಟ್ ಆಗಿರುವ ಮಾರುತಿಯನ್ನು ನೂತನ ಹಂತಕ್ಕೆ ಕೊಂಡೊಯ್ಯಲಿದೆ.

English summary
Leading Indian automobile manufacturer Maruti Suzuki is reportedly planning to become a big time SUV seller. The company which currently does not have even a small stake in the SUV segment is said to be planning to launch four new SUVs in the next two years.
Story first published: Monday, February 18, 2013, 14:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark