ಮಾರುತಿಯಿಂದ ಝೆನ್ ಎಸ್ಟಿಲೊ ಉತ್ಪಾದನೆ ಸ್ಥಗಿತ?

By Nagaraja

ಹಲವಾರು ಕಾರಣಗಳಿಂದಾಗಿ ಮಾರುತಿ ಸುಜುಕಿ ದೇಶದ ಅಗ್ರ ಕಾರು ತಯಾರಕ ಸಂಸ್ಥೆ ಎನಿಸಿಕೊಂಡಿದೆ. ಉತ್ತಮ ನಿರ್ವಹಣೆ, ಮೈಲೇಜ್ ಹಾಗೂ ಸ್ಪರ್ಧಾತ್ಮಕ ದರಗಳಲ್ಲಿ ಮಾರುತಿ ಕಾರುಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಕಂಪನಿ ಯಶಸ್ವಿಯಾಗಿದೆ.

ಆದರೆ ಎಲ್ಲ ಮಾರುತಿ ಕಾರುಗಳಿಗೂ ಮಾರುಕಟ್ಟೆಯಲ್ಲಿ ಯಶ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯ. ಇವುಗಳಲ್ಲಿ ಪ್ರಮುಖವಾಗಿರುವುದು ಝೆನ್ ಎಸ್ಟಿಲೊ. ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಧರೆಗುಳಿದಿರುವುದರಿಂದ 2013 ಮಾರ್ಚ್ ವೇಳೆಗೆ ಉತ್ಪಾದನೆ ಸ್ಥಗಿತಗೊಳಿಸಲು ಮಾರುತಿ ಯೋಜನೆ ಹಾಕಿಕೊಂಡಿದೆ.

ಅಂದ ಹಾಗೆ ಈ ನಿಲುವು ಕಳೆದ ವರ್ಷವೇ ಅನುಸರಿಸಲಾಗಿತ್ತು. ಕಳೆದ ವರ್ಷ ಝೆನ್ ಎಸ್ಟಿಲೊ ಉತ್ಪಾದನೆಯನ್ನು ಕಡಿತಗೊಳಿಸಲಾಗಿತ್ತು. ಇದೀಗ ಉತ್ಪಾದನೆ ಸ್ಥಗಿತಗೊಳಿಸುವ ಯೋಚನೆಯಲ್ಲಿದೆ.

ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಕುಸಿದಿರುವುದು ಹಾಗೂ ಮಾರುತಿಯ ಇತರ ಮಾದರಿಗಳು (ಮಾರುತಿ 800, ಎ-ಸ್ಟಾರ್) ಸಹ ಅದೇ ಸ್ಮರ್ಧಾತ್ಮಕ ದರದಲ್ಲಿ ಗ್ರಾಹಕರನ್ನು ತಲುಪುತ್ತಿರುವುದು ಝೆನ್ ಬೇಡಿಕೆ ಕುಸಿಯಲು ಕಾರಣವಾಗಿದೆ. ಅಲ್ಲದೆ ಪ್ರಮುಖ ಸ್ಪರ್ಧಾಳುಗಳಾದ ಹ್ಯುಂಡೈ ಐ10, ಹೊಂಡಾ ಬ್ರಿಯೊ ಹಾಗೂ ಷೆವರ್ಲೆ ಬೀಟ್‌ಗೆ ಪೈಪೋಟಿ ಒಡ್ಡುವಲ್ಲಿ ವಿಫಲವಾಗಿರುವುದು ಝೆನ್ ಹಿನ್ನಡೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಮಾರುತಿ ಅಧಿಕೃತ ಘೋಷಣೆ ಯಾವಾಗ ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Tuesday, January 29, 2013, 10:20 [IST]
English summary
The Zen Estilo is said to be on its way out of the Indian car market, according to recent reports. In fact, reports claim Maruti Suzuki is planning to shelve the Zen Estilo as early as March 2013.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+