ಬರುತ್ತಿದೆ ಮಾರುತಿಯ ಸಣ್ಣ ಡೀಸೆಲ್ ಕಾರು!

ಸಣ್ಣ ಕಾರು ಮಾರುಕಟ್ಟೆಯಲ್ಲಿ ಅಧಿಪತ್ಯ ಹೊಂದಿರುವ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಎಂಟ್ರಿ ಲೆವೆಲ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಬಲಪಡಿಸುವ ಸ್ಪಷ್ಟ ಯೋಜನೆಯನ್ನು ಹೊಂದಿದೆ.

ಇದರಂತೆ ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾಗಿರುವ ಟಾಟಾ ಮೋಟಾರ್ಸ್‌ನ ಯೋಜನೆಗಳಿಗೆ ಪ್ರತಿತಂತ್ರ ಹೆಣೆಯುತ್ತಿರುವ ಮಾರುತಿ, 800 ಸಿಸಿ ಡೀಸೆಲ್ ಎಂಜಿನ್ ಕಾರು ಬಿಡುಗಡೆಗೊಳಿಸಲು ಸನ್ನದ್ಧವಾಗುತ್ತಿದೆ.


ಹಾಗೊಂದು ವೇಳೆ ಮಾರುತಿಯ ಈ ಯೋಜನೆ ನನಸಾದ್ದಲ್ಲಿ ದೇಶದಲ್ಲಿ ಮೊದಲು 800ಸಿಸಿ ಡೀಸೆಲ್ ಎಂಜಿನ್ ಕಾರು ಬಿಡುಗಡೆಗೊಳಿಸಿದ ಹೆಗ್ಗಳಿಕೆಗೆ ಮಾರುತಿ ಪಾತ್ರವಾಗಲಿದೆ. ಈ ಹಿಂದೆ ಟಾಟಾ ನ್ಯಾನೋ ಡೀಸೆಲ್ ಎಂಜಿನ್ ಮಾರುಕಟ್ಟೆಗಿಳಿಸುವುದಾಗಿ ಟಾಟಾ ಮೋಟಾರ್ಸ್ ಘೋಷಿಸಿದ್ದರೂ ಇದುವರೆಗೆ ನನಸಾಗಿಲ್ಲ. ಟಾಟಾದ ಈ ಯೋಜನೆಯು 2014ರಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ.

ಮಾರುತಿಯು ಈ ಹೊಸತಾದ ಮೈಕ್ರೋ/ಮಿನಿ ಕಾರು ವೈಎಲ್7 (YL7) ಕೋಡ್ ಹೆಸರು ಪಡೆದುಕೊಂಡಿದ್ದು, ಮಾತೃಸಂಸ್ಥೆಯಾದ ಸುಜುಕಿ ಸಾನಿಧ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಇದು ಮಾರುಕಟ್ಟೆಯಲ್ಲಿ ಅಷ್ಟೊಂದು ಯಶ ಕಾಣದ ಎ ಸ್ಟಾರ್ ಹಾಗೂ ಜೆನ್ ಎಸ್ಟಿಲೊ ಆವೃತ್ತಿಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ.

ದೇಶದ ಒಟ್ಟಾರೆ 2.7 ದಶಲಕ್ಷ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 21ರಷ್ಟು ಶೇರನ್ನು ಸಣ್ಣ ಕಾರು ವಿಭಾಗವು ಹೊಂದಿವೆ. ಸಣ್ಣ ಕಾರು ವಿಭಾಗ ಅಷ್ಟೊಂದು ಯಶಸ್ಸನ್ನು ಸಾಧಿಸಿದ್ದರೂ ಇದುವರೆಗೆ ಈ ವಿಭಾಗದಲ್ಲಿ ಡೀಸೆಲ್ ಕಾರುಗಳ ಆಗಮನವಾಗಿಲ್ಲ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಮಾರುತಿ ಸುಜುಕಿ ವೈಎಲ್7 ಮಿನಿ ಕಾರಿನ ಪೆಟ್ರೋಲ್ ಆವೃತ್ತಿಯು ಮೊದಲು ಬಿಡುಗಡೆಯಾಗಲಿದ್ದು, ಆ ಬಳಿಕ ಡೀಸೆಲ್ ವೆರಿಯಂಟ್ ಆಗಮನವಾಗಲಿದೆ.

ಅಂದ ಹಾಗೆ 2014 ದೆಹಲಿ ಆಟೋ ಎಕ್ಸ್‌ಪೋ ಸಂದರ್ಭದಲ್ಲಿ ಅಂದರೆ ಜನವರಿಯಿಂದ ಮಾರ್ಚ್ ಅವಧಿಯೊಳಗೆ 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ವೈಎಲ್7 ಸಣ್ಣ ಕಾರು ದೇಶದ ರಸ್ತೆಗಿಳಿಯಲಿದೆ. ಅದೇ ವರ್ಷದಲ್ಲಿ ಡೀಸೆಲ್ ವರ್ಷನ್ ಕೂಡಾ ಬಿಡುಗಡೆಯಾಗಲಿದ್ದು, ಇದು ಪ್ರತಿ ಲೀಟರ್‌ಗೆ 30 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಪ್ರಸ್ತುತ ದೇಶದಲ್ಲಿ ಅತಿಚಿಕ್ಕ ಡೀಸೆಲ್ ಎಂಜಿನ್ ಕಾರನ್ನು ಷೆವರ್ಲೆ ಬೀಟ್ (996ಸಿಸಿ) ಹೊಂದಿದೆ. ಅದೇ ಹೊತ್ತಿಗೆ ಎಸ್‌ಎಕ್ಸ್4 ಬದಲಾಯಿಸಿರುವ ಮಾರುತಿ ನೂತನ ಸೆಡಾನ್ ವೈಎಲ್‌1 ಕಾರನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದೆ. ಹಾಗೆಯೇ 2014ರಲ್ಲೇ ವೈಎಡಿ ಕೋಡ್ ಪಡೆದುಕೊಂಡಿರುವ ಎಸ್‌ಯುವಿ ಕಾರು ಕೂಡಾ ಆಗಮನವಾಗಲಿದೆ.

ಏತನ್ಮಧ್ಯೆ ಫಿಯೆಟ್ ಡೀಸೆಲ್ ಎಂಜಿನ್‌ಗಳನ್ನು ಸ್ವಿಫ್ಟ್, ಡಿಜೈರ್, ಎರ್ಟಿಗಾ, ರಿಟ್ಜ್ ಹಾಗೂ ಎಸ್‌ಎಸ್‌ಕ್ಸ್4 ಮಾದರಿಗಳಲ್ಲಿ ಆಳವಡಿಸಲಾಗುತ್ತಿದೆ. ಭವಿಷ್ಯದಲ್ಲಿ ತನ್ನದೇ ಘಟಕದಲ್ಲಿ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುವ ಯೋಜನೆಯನ್ನು ಮಾರುತಿ ಹೊಂದಿದೆ.

More from DriveSpark

Article Published On: Tuesday, August 6, 2013, 15:44 [IST]
English summary
Maruti Suzuki may get a head start by being the first to offer a diesel engine option in the lucrative micro/mini car segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+